ಕರ್ನಾಟಕ

karnataka

ETV Bharat / state

ಶಾಸಕರ ಹನಿಟ್ರ್ಯಾಪ್​​​​​​ ಪ್ರಕರಣ: ಆರೋಪಿಗಳ ವಿರುದ್ಧ ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಕೆ

10ಕ್ಕೂ ಹೆಚ್ಚು ಶಾಸಕರೂ ಹನಿಟ್ರ್ಯಾಪ್​​ನಲ್ಲಿ ಸಿಲುಕಿರುವ ಆರೋಪ ಕೇಳಿ ಬಂದಿದ್ದು, ಒಬ್ಬ ಶಾಸಕರ ದೂರಿನ ಆಧಾರದ ಮೇಲೆ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

honeytrap
ಶೀಘ್ರವೇ ಹನಿಟ್ರ್ಯಾಪ್​ ದೋಷಾರೋಪ ಪಟ್ಟಿ

By

Published : Dec 17, 2019, 10:34 AM IST

ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ವಲಯದಲ್ಲಿ ಸದ್ದು ಮಾಡಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು‌ ಸಿಸಿಬಿ ಅಧಿಕಾರಿಗಳು ಮುಂದಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಾಸಕನ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿಸಲಾಗಿದೆ. ಹನಿಟ್ರ್ಯಾಪ್​ಗೆ ಒಳಗಾದ ಇನ್ನುಳಿದ ಶಾಸಕರು ದೂರು ನೀಡಲು ಮುಂದಾಗಿಲ್ಲ ಎನ್ನಲಾಗಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಸದ್ಯ ಪ್ರಮುಖ ಆರೋಪಿ ರಘು ಹಾಗೂ ಆತನ ಪ್ರೇಯಸಿ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳನ್ನು ವಿಚಾರಿಸಿದ ಸಂದರ್ಭದಲ್ಲಿ ಇನ್ನಷ್ಟು ಮಾಹಿತಿ ಲಭಿಸಿದೆ ಎನ್ನಲಾಗಿದೆ. ಇನ್ನು ಆರೋಪಿಗಳ‌ ಮನೆ ಮೇಲೆ ದಾಳಿ‌ ಮಾಡಿದಾಗ ಇದಕ್ಕೆ ಸಂಬಂಧಪಟ್ಟ ಪೆನ್ ಡ್ರೈವ್, ಹನಿಟ್ರ್ಯಾಪ್​​​​ಗೆ ಸಂಬಂಧಿಸಿದ ವಿಡಿಯೋ ಇರುವ ಮೊಬೈಲ್​ ಸಿಕ್ಕಿದ್ದವು. ಆದರೆ, ಶಾಸಕರು ದೂರು ನೀಡಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details