ಕರ್ನಾಟಕ

karnataka

ETV Bharat / state

Tokyo Olympics: ರಾಜ್ಯದ ಮೂವರು ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ವಿತರಣೆ

ಜುಲೈ 23ರಿಂದ ಟೋಕಿಯೋ ಒಲಿಂಪಿಕ್​​ ಆರಂಭಗೊಳ್ಳುತ್ತಿದೆ. ಈಗಾಗಲೇ ಭಾರತೀಯ ಕ್ರೀಡಾಪಟುಗಳು ಜಪಾನ್ ತೆರಳಲು ಸಿದ್ಧಗೊಂಡಿದ್ದಾರೆ. ಈ ನಡುವೆ ಕರ್ನಾಟಕದಿಂದ ತೆರಳಲಿರುವ ಮೂವರಿಗೆ ಸಿಎಂ ಯಡಿಯೂರಪ್ಪ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿದ್ದಾರೆ.

10-lakhs-distributed-for-each-of-the-five-athletes-of-the-state
ರಾಜ್ಯದ ಐವರು ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ವಿತರಣೆ

By

Published : Jul 14, 2021, 6:43 PM IST

Updated : Jul 15, 2021, 12:46 PM IST

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ‌ಭಾಗವಹಿಸಲು ರಾಜ್ಯದಿಂದ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಿ ಮತ್ತು ಅವರ ಕುಟುಂಬದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾಗೆ ಜುಲೈ 23ರಿಂದ ಸೆಪ್ಟೆಂಬರ್‌ 5ರ ವರೆಗೆ ಒಲಿಂಪಿಕ್‌ ಕ್ರೀಡಾಕೂಟಕ್ಕೆ ತೆರಳುವ ರಾಜ್ಯದ ಮೂವರು ಕ್ರೀಡಾಪಟುಗಳನ್ನು ಕರೆಸಿಕೊಂಡ ಸರ್ಕಾರದ ಪರವಾಗಿ ಸನ್ಮಾನಿಸಿ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ನೀಡಿದರು.

ರಾಜ್ಯದ ಐವರು ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ವಿತರಣೆ

ಟೋಕಿಯೋ ಒಲಿಂಪಿಕ್ಸ್​ಗೆ ಆಯ್ಕೆಯಾಗಿರುವ ಈಕ್ವೆಸ್ಟ್ರಿಯನ್ ಕ್ರೀಡಾಪಟು‌ ಪೌವಾದ್ ಮಿರ್ಜಾ, ಈಜುಪಟು ಶ್ರೀಹರಿ ನಟರಾಜ್ ಮತ್ತು ಗಾಲ್ಫ್​ ಆಟಗಾರ್ತಿ‌ ಅದಿತಿ ಅಶೋಕ್ ಪ್ರೋತ್ಸಾಹಧನ ಸ್ವೀಕರಿಸಿ ಉತ್ತಮ ಸಾಧನೆ ತೋರುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೆಆರ್​ಎಸ್​ ಡ್ಯಾಂ ಬಿರುಕು ಹೇಳಿಕೆ: ಸುಮಲತಾ ವಿರುದ್ಧ ಸಚಿವ ಅಶೋಕ್​ ಸಿಡಿಮಿಡಿ

Last Updated : Jul 15, 2021, 12:46 PM IST

ABOUT THE AUTHOR

...view details