ಕರ್ನಾಟಕ

karnataka

ETV Bharat / state

ಕನ್ಯೆಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​.. ರೈತರನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10ಲಕ್ಷ ಪ್ರೋತ್ಸಾಹ ಧನಕ್ಕೆ ಒತ್ತಾಯ - ETV bharath

ರೈತಾಪಿ ಯುವಕರನ್ನು ಹೆಣ್ಣು ಮಕ್ಕಳು ಮದುವೆ ಆಗಲು ಇಚ್ಛಿಸುವುದಿಲ್ಲ, ಆದ್ಧರಿಂದ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನವಾಗಿ 10ಲಕ್ಷ ರೂ ಸೇರಿ ವಿಶೇಷ ಪ್ಯಾಕೇಜ್​ನ್ನು ಘೋಷಿಸಬೇಕು ಎಂದು ಕೆ ಜಿ ಕುಮಾರ್​ ಹೇಳಿದರು.

10-lakh-incentive-for-girls-marrying-farmer-youths
ರೈತರನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10ಲಕ್ಷ ಪ್ರೋತ್ಸಾಹ ಧನಕ್ಕೆ ಒತ್ತಾಯ

By

Published : Nov 28, 2022, 11:01 PM IST

ಬೆಂಗಳೂರು:ದೇಶಕ್ಕೆ ಆಹಾರ ಉತ್ಪಾದನೆ ಮಾಡುವಲ್ಲಿ ಕೃಷಿಕರ ಪಾತ್ರ ಮಹತ್ತರವಾದುದು. ದೇಶಕ್ಕೆ ಸೈನಿಕನ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ದೇಶಕ್ಕಾಗಿ ಆಹಾರ ಉತ್ಪಾದನೆ ಮಾಡುವ ಕೃಷಿಕನ ಪಾತ್ರವೂ ಮಹತ್ವವಾದುದು. ರೈತ ದೇಶದ ಬೆನ್ನೆಲುಬು ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಗ್ರಾಮೀಣ ಯುವ ಕೃಷಿಕರ ಬಗ್ಗೆ ಚಿಂತಿಸಿ, ಚರ್ಚಿಸಿ , ಪರಿಹಾರವನ್ನು ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು, ಮಂತ್ರಿಗಳು, ಶಾಸಕರುಗಳು ಗ್ರಾಮೀಣ ಪ್ರದೇಶದ ರೈತಾಪಿ ಯುವಕರ ಬದುಕಿನ ಬಗ್ಗೆ ಗಮನಹರಿಸಬೇಕು ಎಂದು ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ ಜಿ ಕುಮಾರ್ ತಿಳಿಸಿದರು.

ವಿಶೇಷ ಪ್ಯಾಕೆಜ್​ ಘೋಷಿಸಬೇಕು:ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಕೆ.ಜಿ ಕುಮಾರ್ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚಿಸಿ, ಯೋಜನೆಯೊಂದನ್ನು ರೂಪಿಸಿ ರೈತಾಪಿ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಗೆ ಷರತ್ತು ಬದ್ಧವಾಗಿ 10 ಲಕ್ಷ ರೂ. ಗಳ ಪ್ರೋತ್ಸಾಹ ಧನ ಸೇರಿದ ವಿಶೇಷ ಪ್ಯಾಕೇಜ್‌ನ್ನು ಸರ್ಕಾರ ಘೋಷಿಸಬೇಕು. ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೃಷಿಯಲ್ಲಿ ತೊಡಗಿಕೊಂಡ ರೈತಾಪಿ ಯುವಕರ ಬದುಕಿಗೆ ಒಂದು ಪರಿಹಾರವನ್ನು ನೀಡಬೇಕು ಎಂದರು.

ಈಗ ಈಗಾಗಲೇ ಅತಿವೃಷ್ಟಿ- ಅನಾವೃಷ್ಟಿ, ಬರಗಾಲ, ವಿವಿಧ ಕಾರಣಗಳಿಂದ ರೈತರು, ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ಹಲವಾರು ಕಾರಣಗಳಿಂದ ಹಳ್ಳಿಗಳಿಂದ ಪಟ್ಟಣದತ್ತ ವಲಸೆ ಬಂದಿರುತ್ತಾರೆ. ಉಳಿದಿರುವ ಅಲ್ಪ-ಸ್ವಲ್ಪ ರೈತಾಪಿ ಯುವಕರು ವ್ಯವಸಾಯದಲ್ಲಿ ತೊಡಗಿಸಿಕೊಂಡು ಆಹಾರ ಉತ್ಪಾದನೆ ಮಾಡಿ ದೇಶಕ್ಕೆ ನೆರವಾಗುತ್ತಿದ್ದಾರೆ. ಈ ರೈತಾಪಿ ಯುವಕರು ಆರ್ಥಿಕವಾಗಿ ಸದೃಢರಾಗಿದ್ದರೂ ಕೂಡ ಯುವತಿಯರು ಉದ್ಯೋಗಸ್ಥ ಯುವಕರನ್ನು ಮಾತ್ರ ಮದುವೆಯಾಗಲು ಇಚ್ಛಿಸುತ್ತಾರೆ. ಎಂದುಕೊಂಡು ಇವರೂ ಕೂಡ ಕೃಷಿಯನ್ನು ಕೈಬಿಟ್ಟು, ಉದ್ಯೋಗವನ್ನು ಅರಸಿಕೊಂಡು ಪಟ್ಟಣಕ್ಕೆ ಸೇರಿದರೆ ಆಹಾರ ಉತ್ಪಾದನೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ಹಸಿರು ಪ್ರತಿಷ್ಠಾನದಿಂದ ಮಾಧ್ಯಮಗೋಷ್ಟಿ

ಸಾಮಾಜಿಕ ಪಿಡುಗಿಗೆ ಪರಿಹಾರ ರೂಪಿಸಬೇಕು:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದ ರೈತಾಪಿ ಯುವಕರನ್ನು ಕಾಡುತ್ತಿರುವ ಈ ಸಾಮಾಜಿಕ ಪಿಡುಗಿಗೆ ಪರಿಹಾರ ರೂಪಿಸಬೇಕು. ಪಕ್ಷ ಭೇದ ಮರೆತು ಎಲ್ಲಾ ಶಾಸಕರು ಒಗ್ಗಟ್ಟಾಗಿ ರೈತಾಪಿ ಯುವಕರ ಬದುಕಿಗೆ ಒಂದು ಅರ್ಥವನ್ನು ರೂಪಿಸಿಕೊಡುವಲ್ಲ ಚಿಂತಿಸಿ, ಪರಿಹಾರವನ್ನು ಸರ್ಕಾರದಿಂದ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಹಸಿರು ಪ್ರತಿಷ್ಠಾನದ ರೇಣುಕಾ ಭಕ್ತರಹಳ್ಳಿ, ಕಾರ್ಯಾಧ್ಯಕ್ಷ ಪಿ.ಕೆ. ಕುಮಾರ್, ಗೌರವಾಧ್ಯಕ್ಷ ಎ.ಎಸ್ . ಗೋವಿಂದೇಗೌಡ, ಕೋಶಾಧ್ಯಕ್ಷ ಕೆ. ವೇಣುಗೋಪಾಲ್, ಕಾರ್ಯದರ್ಶಿ ಬಿ. ರವೀಶ್ ಗೌಡ, ಮಾರ್ಗದರ್ಶಕರು ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ಟಿ.ಹೆಚ್.ಆಂಜನಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ :ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು

ABOUT THE AUTHOR

...view details