ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್ ಸರ್ಜರಿ ಮಾಡಿದ್ದು, ಐಎಂಎ ವಂಚನೆ ಪ್ರಕರಣದ ತನಿಖಾಧಿಕಾರಿ ಹಾಗೂ ಡಿಸಿಪಿ ಗಿರೀಶ್ ಸೇರಿ 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
10 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ..
ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್ ಸರ್ಜರಿ ಮಾಡಿದ್ದು, ಐಎಂಎ ವಂಚನೆ ಪ್ರಕರಣದ ತನಿಖಾಧಿಕಾರಿ ಹಾಗೂ ಡಿಸಿಪಿ ಗಿರೀಶ್ ಸೇರಿ 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಡಾ.ಎ. ಪರಶಿವಮೂರ್ತಿ, ಬೆಂಗಳೂರು ನಗರ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಅಬ್ದುಲ್, ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಬಿ.ಆರ್.ರವಿಕಾಂತೇಗೌಡ, ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ರವಿ ಡಿ.ಚನ್ನಣ್ಣನವರ್, ಸಿಸಿಬಿ ಡಿಸಿಪಿ ಕುಲ್ದೀಪ್ ಕುಮಾರ್ ಆರ್.ಜೈನ್, ಕೆಎಸ್ಆರ್ಪಿ 9ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ಎಸ್.ಗಿರೀಶ್, ಸಿಐಡಿ ಅಪರಾಧ ಹಾಗೂ ಆರ್ಥಿಕ ವಿಭಾಗದ ಐಜಿಪಿ ಬಿ.ದಯಾನಂದ್, ಕೆಎಸ್ಆರ್ಪಿ ಐಜಿಪಿ ಪಿ.ಹರಿಶೇಖರನ್ ಹಾಗೂ ಮಂಗಳೂರು ನಗರ ಡಿಸಿಪಿಯಾಗಿ ಅನುರಾಗ್ ಗಿರಿ ಅವರನ್ನ ಕೂಡಲೇ ವರ್ಗಾವಣೆಗೊಳಿಸಿ ಎಂದು ಆದೇಶಿಸಿದೆ.