ಬೆಂಗಳೂರು : ಗೋಡೆಯನ್ನು ಕೊರೆದು ಒಳಗೆ ಪ್ರವೇಶಿಸಿ ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ 10 ಜನರ ತಂಡವನ್ನು ಬೆಂಗಳೂರಿನ ಜೆಪಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮರಿಂದ 55 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಎ.ಎಂ.ಹುಸೈನ್, ಮನರುಲ್ಲಾ ಹಕ್, ಸುಲೇಮಾನ್ ಶೇಖ್, ಅಜಿಜುರ್ ರೆಹಮಾನ್, ರಮೇಶ್ ಬಿಷ್ಠ, ಸದ್ದಾಂ, ಮನರುಲ್ ಶೇಖ್, ಅನಾರುಲ್ಲಾ ಶೇಖ್, ಸೈದ್ದೀನ್ ಶೇಖ್, ಸಲೀಂ ಶೇಖ್, ಶೈನೂರ್ ಬೀಬಿ ಎಂಬುವರೇ ಬಂಧಿತರು.
ಗೋಡೆ ಕೊರೆದು ಬಂಗಾರದ ಅಂಗಡಿಗೆ ಕನ್ನ ತಮ್ಮ ಅಂಗಡಿಯಲ್ಲಿ 5 ಕೆಜಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಜುವೆಲ್ಲರಿ ಮಾಲೀಕರು ದೂರು ನೀಡಿದ್ದರು. ಅಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಇದುವರೆಗೆ 1 ಕೆಜಿ 100 ಗ್ರಾಂ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಚಿನ್ನಾಭರಣಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ :ಶಾಪಿಂಗ್ ಕಾಂಪ್ಲೆಕ್ಸ್ನಿಂದ ಬಿದ್ದು ಯುವತಿ ಸಾವು: ರಕ್ಷಿಸಲು ಬಂದ ಯುವಕನೂ ಕೆಳಗೆ ಬಿದ್ದ!