ಕರ್ನಾಟಕ

karnataka

ETV Bharat / state

ಮೆಡಿಕಲ್ ಕೋರ್ಸ್ ಮುಗಿದ ಬಳಿಕ 1 ವರ್ಷ ಕಡ್ಡಾಯ ಸರ್ಕಾರಿ ಸೇವೆ: ಆನ್ ಲೈನ್ ನೋಂದಣಿ ಆರಂಭ

ಮೆಡಿಕಲ್​ ಕೋರ್ಸ್​ ಮುಗಿದ ಬಳಿಕ ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಮಾಡಲೇಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್

By

Published : Aug 21, 2020, 10:19 PM IST

ಬೆಂಗಳೂರು:ಆಗಸ್ಟ್ 2019ರ ಸುಪ್ರೀಂಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ಬಳಿಕ 1 ವರ್ಷ ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಲು ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿಜಿ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ರೆಸಿಟೆಂಡ್ ಡಾಕ್ಟರ್ ಅಥವಾ ಆರೋಗ್ಯ ಇಲಾಖೆಯಲ್ಲಿ ತತ್ಸಮಾನ ಹುದ್ದೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸರ್ಕಾರದ ಆದೇಶ

ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಮುಗಿಯುವ ಹಾಗೇ ಕಾಣ್ತಿಲ್ಲ. ಹೀಗಾಗಿ ದೀರ್ಘಾವಧಿ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮ ಅವಶ್ಯಕವಾಗಿದೆ. ರಾಜ್ಯದಿಂದ ಪದವಿ ಪಡೆಯುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸರ್ಕಾರಿ ಸೇವೆ ಸಲ್ಲಿಸಬೇಕಿದೆ.

ಸಾಂಕ್ರಾಮಿಕ ರೋಗಗಳ ಕಾಯ್ದೆ ಬಳಸಿಕೊಂಡು ಹೊಸ ನಿಯಮ‌ ರೂಪಿಸಿದೆ. 2015 ರಲ್ಲಿ ವಿವಿಧ ವೈದ್ಯಕೀಯ ಕೋರ್ಸ್​ಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತೆ. ವಿದ್ಯಾರ್ಥಿಗಳು ತಾವಾಗಿಯೇ ಮುಂದೆ ಬಂದು ಪೋಸ್ಟಿಂಗ್ ಕೇಳಿ ಹಾಕಿಸಿಕೊಳ್ಳತಕ್ಕದ್ದು. ಸದ್ಯ ಆನ್ ಲೈನ್ ನೋಂದಣಿ ಶುರುವಾಗಿದ್ದು, ಆಯ್ಕೆ ಮಾಡಿಕೊಳ್ಳಬಹುದು ಎಂದಿದ್ದಾರೆ.

ABOUT THE AUTHOR

...view details