ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಅನ್‌ಲಾಕ್ ಬಳಿಕ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಕಾನಗರದಲ್ಲಿ ಮತ್ತೊಂದು ಘಟನೆ ನಡೆದಿದೆ.
ಖದೀಮ ಸ್ಕೂಟರ್ ಎಗರಿಸುವ ಸಿಸಿಟಿವಿ ದೃಶ್ಯ ತಡರಾತ್ರಿ ಫುಡ್ ಡೆಲಿವರಿ ಬಾಯ್ ಒಬ್ಬ ಸಂಗ್ರಹಿಸಿದ ಹಣವನ್ನು ತನ್ನ ಡಿಯೋ ಸ್ಕೂಟರ್ನಲ್ಲಿ ಇರಿಸಿದ್ದ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಕಳ್ಳನೊಬ್ಬ ಗಾಡಿ ಸಮೇತ ಎಸ್ಕೇಪ್ ಆಗಿದ್ದಾನೆ. ಖದೀಮನ ಖತರ್ನಾಕ್ ಕೆಲಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂಓದಿ: ನಗ್ನ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಸ್ನೇಹಿತರ ಪಾರ್ಟಿಯಲ್ಲಿ ಬಿತ್ತಾ ಹೆಣ?
ಡೆಲಿವರಿ ಬಾಯ್ ಡಿಯೊ ಗಾಡಿಯಲ್ಲಿ 1 ಲಕ್ಷ ರೂಪಾಯಿ ಹಣ ಇಟ್ಟಿದ್ದ ವೇಳೆ ಇದನ್ನೇ ಗಮನಿಸುತ್ತಿದ್ದ ಕಳ್ಳ, ಹಣ ಮತ್ತು ಗಾಡಿಯನ್ನು ಕದ್ದೊಯ್ದಿದ್ದಾನೆ. ಘಟನೆ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸ್ಕೂಟರ್ ಕದ್ದೊಯ್ಯುವ ಸಿಸಿಟಿವಿ ಫುಟೇಜ್ ಅನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆತನ ಬಂಧನಕ್ಕಾಗಿ ಶೋಧ ಆರಂಭಿಸಿದ್ದಾರೆ.