ಕರ್ನಾಟಕ

karnataka

ETV Bharat / state

1 ನಿಮಿಷಕ್ಕೆ 1 ಲಕ್ಷ ಸೈಬರ್ ಕ್ರೈಮ್‌: ಸೋಷಿಯಲ್‌ ಮೀಡಿಯಾ ಹಣ ಗಳಿಕೆ ದಂಧೆಯಂತೆ..! - news kannada

ಸಾಮಾಜಿಕ ಜಾಲತಾಣಗಳ ಮೂಲಕ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೊಂದು ಹಣ ಮಾಡುವ‌ ದಂಧೆಯಾಗಿ ಬೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ.

ದುರ್ಬಳಕೆ ಯಾಗುತ್ತಿರುವ ಸೋಷಿಯಲ್‌ ಮೀಡಿಯಾ

By

Published : Feb 23, 2019, 10:31 AM IST

ಬೆಂಗಳೂರು:ಇತ್ತೀಚಿಗೆ ಸೋಷಿಯಲ್ ಮೀಡಿಯಾ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದ್ದು, ಪಬ್​ ಜಿ ಗೇಮ್​ನಿಂದ ಹಿಡಿದು ಟಿಕ್​ ಟಾಕ್ ತನಕ ಎಲ್ಲರಲ್ಲೂ ಕ್ರೇಜ್ ಸೃಷಿ ಮಾಡಿಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಉಪಯೋಗಕ್ಕಿಂತ ದುರ್ಬಳಕೆ ಪ್ರಕರಣಗಳೇ ಹೆಚ್ಚಾಗುತ್ತಿದೆ.

ಈಗ ಹಣ ಮಾಡುವ‌ ದಂಧೆಯಾಗಿ ಸೋಷಿಯಲ್‌ ಮೀಡಿಯಾ ಬಳಕೆಯಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ. ಇದು ಸದ್ದಿಲ್ಲದೆ ತನ್ನ ಕಬಂಧಬಾಹು ಚಾಚಿದೆ. ಹುಡುಗಿಯರ ಹೆಸರಿನಲ್ಲಿ ಫೇಸ್​ಬುಕ್​, ಇನ್ಸ್​ಟಾಗ್ರಾಂ​, ಟಿಕ್ ಟಾಕ್ ಖಾತೆ ತೆರೆಯುವ ಅಪರಿಚಿತರು, ಕಣ್ಣು ಕುಕ್ಕುವಂತಹ ಯಾರದ್ದೋ ಫೋಟೋ ಹಾಗೂ ವೀಡಿಯೋಗಳನ್ನು ಅಪ್​ಲೋಡ್​ ಮಾಡುತ್ತಾರೆ. ಬಳಿಕ ಆ ಪೋಸ್ಟ್​ಗಳಿಗೆ ಹೆಚ್ಚು ಪ್ರತಿಕ್ರಿಯಿಸುವವರನ್ನ ಸಂಪರ್ಕಿಸಿ ಬಣ್ಣ ಬಣ್ಣದ ಮಾತುಗಳನ್ನು ಮಾತನಾಡುವುದು, ಬಳಿಕ ನೇರ ಡೀಲ್ ಕುದುರಿಸುವುದು ಇವರ ಕೆಲಸ. ಅದನ್ನೆ ನಿಜ ಎಂದುಕೊಂಡು ಲಡ್ಡು ಬಂದು ಬಾಯಿಗೆ ಬಿತ್ತು ಅಂತಾ ನಂಬುವವರು, ಖದೀಮರು ಹೇಳಿದಂತೆ ಆನ್​ಲೈನ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಂತೆ, ಅಲ್ಲಿಂದ ಜಾರಿಕೊಳ್ಳುವುದೇ ಇವರ ಕೆಲಸ. ಹಣ ಸಿಕ್ಕ ಬಳಿಕ ಆ ವ್ಯಕ್ತಿ ನಿಮಗೆ ಸಂಪರ್ಕಕ್ಕೆ ಸಿಗುವುದೇ ಇಲ್ಲ. ಅಸಲಿಗೆ ಅಲ್ಲಿ ಯಾವ ಹುಡುಗಿಯೂ ಇರುವುದಿಲ್ಲ.

ಇದೆಲ್ಲ ಸುಳ್ಳಿನ ಕಂತೆ ಅಷ್ಟೇ:

ಇದಿಷ್ಟು ಸುಳ್ಳಿನಿಂದ ಹಣ ಸಂಗ್ರಹಿಸುವ ದಂಧೆಯ ಕಥೆಯಾದರೆ. ಮತ್ತೊಂದೆಡೆ ವ್ಯವಸ್ಥಿತ ವೇಶ್ಯಾವಾಟಿಕೆಗೂ ಸಹ ಸಾಮಾಜಿಕ ತಾಣಗಳು ಬಳಕೆಯಾಗುತ್ತಿವೆ. ಯಾರೊಬ್ಬರೂ ಪ್ರಶ್ನಿಸದ, ಯಾರು ಯಾರನ್ನ ಬೇಕಾದರೂ ಸಂಪರ್ಕಿಸಬಹುದಾದ ಆಯ್ಕೆ ಇರುವುದರಿಂದ ಮತ್ತೇರಿಸುವಂತೆ ಅಶ್ಲೀಲ ಮಾತುಕತೆ, ವೀಡಿಯೋ ಸಂಭಾಷಣೆಗೆ ಸಿದ್ಧರಿದ್ದೀವಿ ಎಂದು ನೇರವಾಗಿ ಆಫರ್ ಮಾಡಿ ಡೀಲ್ ಕುದುರಿಸಿಕೊಳ್ಳಲು ಸಹ ಇದೇ ಸಾಮಾಜಿಕ ತಾಣಗಳು ಬಳಕೆಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಫೇಸ್​ಬುಕ್ ಸ್ನೇಹಿತ-ಸ್ನೇಹಿತೆಯಿಂದ ಮೋಸ ಹೋಗಿದ್ದೇವೆ, ಕಿರುಕುಳ ಅನುಭವಿಸುತ್ತಿದ್ದೇವೆ ಅನ್ನೋ ಸಾಕಷ್ಟು ದೂರುಗಳು ಇತ್ತೀಚಿಗೆ ಪೊಲೀಸ್ ಠಾಣೆಯ ಕದ ತಟ್ಟಿವೆ. ಯುವತಿಯೊಬ್ಬಳು ಟಿಕ್ ಟಾಕ್​ನಲ್ಲಿ ಹರಿಬಿಟ್ಟಿದ್ದ ವೀಡಿಯೋವನ್ನು ಟ್ರೋಲ್ ಮಾಡಿದ್ದು ಇದಕ್ಕೆ ಮತ್ತೊಂದು ಸಾಕ್ಷಿ.

ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್​ ನಂತಹ ಹಲವು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಯುವ ಜನಾಂಗದವರ ವೀಕ್​ನೆಸ್​ ಅರ್ಥ ಮಾಡಿಕೊಂಡು ಅವರಿಂದ ವೀಡಿಯೋ ಹಾಕುವಂತೆ ಪ್ರಚೋದಿಸುವುದು, ಇದಕ್ಕಾಗಿ ಹಣದ ಆಮಿಷ, ಅಲ್ಲದೆ ವೀಡಿಯೊ ಹೋಗುವ ಸರ್ವರ್​ ಹ್ಯಾಕ್‌ ಮಾಡಿ ವೈಯಕ್ತಿಕ ವೀಡಿಯೋ ಹಾಕಿ‌ ಹಣ ಗಳಿಸುವ ದಂಧೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸೈಬರ್ ತಜ್ಞೆ ಶುಭಮಂಗಳ.

ದೇಶದಲ್ಲಿ ಒಂದು ಸೆಕೆಂಡ್​​ಗೆ ಒಂದು ಲಕ್ಷ ಸೈಬರ್ ಪ್ರಕರಣ ದಾಖಲಾಗುತ್ತಿವೆ. ಅದರಲ್ಲೂ ಕಿಕ್ರೆಟ್ ಬೆಟ್ಟಿಂಗ್, ಸದಾ ಆನ್​​ಲೈನ್​ನಲ್ಲಿ ಮುಳುಗಿರುವವರನ್ನು ಗುರಿಯಾಗಿಸಿಕೊಂಡು ಅವರ ನ್ಯೂನ್ಯತೆಯನ್ನು ಎನ್​ಕ್ಯಾಷ್ ಮಾಡಿಕೊಂಡು ಅವರಿಂದ ಹಣ ಪಡೆದುಕೊಳ್ಳುವ ಡಿಜಿಟಲ್​ ಮಾಫಿಯಾ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಎಚ್ಚರವಾಗಿರಬೇಕು ಎನ್ನುತ್ತಾರೆ ಸೈಬರ್ ತಜ್ಞೆ.

ಡಿಜಿಟಲ್ ಪ್ರಪಂಚದಲ್ಲಿ ಬರೋದು ಎಲ್ಲವೂ ಸತ್ಯವಲ್ಲ!

ಆನ್​ಲೈನ್​ನಲ್ಲಿ ಬರುವ ಎಲ್ಲಾ ಅಪ್ಲಿಕೇಷನ್​ಗಳು ಅಥವಾ ಮಾಹಿತಿಗಳು ಸತ್ಯವಲ್ಲ.‌ ಕೆಲ ಅಪ್ಲಿಕೇಷನ್​ಗಳು ಯುವ ಜನಾಂಗದ ನ್ಯೂನ್ಯತೆ ಅರಿತು ಅವರಿಗೆ ಅರಿವಿಲ್ಲದಂತೆ ವೀಡಿಯೋಗಳನ್ನು ಹಣಕ್ಕೆ ಮಾರಾಟ ಮಾಡುವ ಜಾಲ ಅವ್ಯಾಹತವಾಗಿ ನಡೆಯುತ್ತಿದೆ. ವೈಯಕಿಕ್ತ ವೀಡಿಯೋ ಹಾಕಿ ಎಲ್ಲರೂ ತಮ್ಮ ವೀಡಿಯೋ ನೋಡಿ ಲೈಕ್ ಒತ್ತಬೇಕೆಂಬ ಮೋಹ ಹೆಚ್ಚಾಗುತ್ತಿದ್ದು, ಇದು ಅಪಾಯವನ್ನು ತಂದೊಡ್ಡುತ್ತಿದೆ.

ABOUT THE AUTHOR

...view details