ಬೆಂಗಳೂರು: ಗ್ರಾಹಕರು ತಮ್ಮ ಹಣ ಹಾಗೂ ಚಿನ್ನಾಭರಣ ಸೇಫ್ ಆಗಿರಲಿ ಎಂದು ಬ್ಯಾಂಕ್ ಲಾಕರ್ ಮೊರೆ ಹೋಗ್ತಾರೆ. ಆದರೀಗ ಬ್ಯಾಂಕ್ ಲಾಕರ್ ನಲ್ಲಿದ್ದ ಚಿನ್ನಾಭರಣವನ್ನೇ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜಯನಗರ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಲಾಕರ್ ನಲ್ಲಿದ್ದ 85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಶಿವಪ್ರಸಾದ್ ಎಂಬುವರು ಬ್ಯಾಂಕ್ ಲಾಕರ್ ನಲ್ಲಿ 1.73 ಕೆ.ಜಿ ಚಿನ್ನಾಭರಣವನ್ನು ಕಳೆದ ಫೆಬ್ರವರಿಯಲ್ಲಿ ಬ್ಯಾಂಕ್ ಲಾಕರ್ ನಂಬರ್ 24ರಲ್ಲಿ ಇಟ್ಟಿದ್ದರು. ಆದರೆ ಜುಲೈ 22 ರಂದು ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ತಿಳಿದುಬಂದಿದೆ.