ಕೆ.ಆರ್.ಪುರ:ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೈಗೊಂಡಿರುವ ನಿಧಿ ಸಂಗ್ರಹ ಮಹಾ ಅಭಿಯಾನದಲ್ಲಿ ಕೆ.ಆರ್.ಪುರ ಕ್ಷೇತ್ರದ 2 ವಾರ್ಡ್ನಿಂದ ಸುಮಾರು ಒಂದು ಕೋಟಿ ನಿಧಿ ಸಂಗ್ರಹವಾಗಿದೆ.
ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಸ್ಲಿಂ ಬಾಂಧವರು ಸುಮಾರು ಆರು ಲಕ್ಷ ರೂ. ನೀಡಿ ನಿಧಿ ಸಂಗ್ರಹಕ್ಕೆ ಕೈಜೋಡಿಸಿದ್ದಾರೆ ಎಂದರು.
ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ಐದು ಲಕ್ಷ ಹಾಗೂ ಪಿ.ಜೆ.ಅಂತೋಣಿಸ್ವಾಮಿ ವೈಯಕ್ತಿಕವಾಗಿ ಐದು ಲಕ್ಷ ರೂ. ನೀಡಿದ್ದಾರೆ. ದೇವರ ಸೇವೆಗೆ ಧರ್ಮ ಎನ್ನುವುದಿಲ್ಲ. ಈ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಿಬೇಕು ಎಂದರು.
ಕೆ.ಆರ್.ಪುರ ವಾರ್ಡ್ನಲ್ಲಿ ಸುಮಾರು 40 ಲಕ್ಷ, ಬಸವನಪುರ ವಾರ್ಡ್ನಲ್ಲಿ ಸುಮಾರು 50 ಲಕ್ಷ ಸೇರಿದಂತೆ ವಿವಿಧೆಡೆ ಸುಮಾರು ಒಂದು ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.
ನಿಧಿ ಸಂಗ್ರಹ ಮಹಾ ಅಭಿಯಾನದಲ್ಲಿ ಸಚಿವ ಭೈರತಿ ಬಸವರಾಜ್ ಓದಿ:ಕೃಷಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಬಿ.ಸಿ.ಪಾಟೀಲ್ ಸ್ಪಷ್ಟನೆ ಕೊಡಲಿ: ಸಾ.ರಾ.ಮಹೇಶ್
ನಿಧಿ ಸಂಗ್ರಹ ಮಹಾ ಅಭಿಯಾನ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವ ಪಾರಂಪರಿಕ ಇತಿಹಾಸ ಹಾಗೂ ಸಂಸ್ಕೃತಿಯ ಪುನರುಜ್ಜೀವನದ ಮೈಲಿಗಲ್ಲು ಎನಿಸುವಂತಹದ್ದು. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಎಲ್ಲರ ಭಾಗೀದಾರಿಕೆ ಇರಬೇಕೆಂಬ ಉದ್ದೇಶದಿಂದ ಧನ ಸಂಗ್ರಹ ಕಾರ್ಯ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಭಕ್ತರು ವೈಯಕ್ತಿಕವಾಗಿ ಕುಟುಂಬದ ಪರವಾಗಿ ಹಣವನ್ನು ದೇಣಿಗೆ ನೀಡಬೇಕು. ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದರು.