ಕರ್ನಾಟಕ

karnataka

ETV Bharat / state

ಜೊಮ್ಯಾಟೋ ವಿರುದ್ಧ ತಿರುಗಿಬಿದ್ದ ಡೆಲವರಿ ಬಾಯ್ಸ್​... ಆನೇಕಲ್​ನಲ್ಲಿ ಪ್ರತಿಭಟನೆ

ಜೊಮ್ಯಾಟೋ​ ಕಂಪನಿ ವಿರುದ್ಧ ಡೆಲವರಿ ಹುಡುಗರೇ ಸರಿಯಾದ ವೇತನ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

By

Published : Sep 15, 2019, 6:22 AM IST

ಝೊಮೆಟೊ ಕಂಪನಿ ವಿರುದ್ಧ ತಿರುಗಿಬಿದ್ದ ಝೊಮೆಟೊ ಡೆಲಿವರಿ ಹುಡುಗರು

ಆನೇಕಲ್: ಜೊಮ್ಯಾಟೋ ಕಂಪನಿ ವಿರುದ್ಧ ಡೆಲವರಿ ಹುಡುಗರಾಗಿ ದುಡಿಯುವ ಯುವಕರೇ ತಿರುಗಿ ಬಿದ್ದಿದ್ದಾರೆ. ಸರಿಯಾದ ರೀತಿಯ ವೇತನ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿದಿನ ಹಗಲು ರಾತ್ರಿ ಎನ್ನದೇ ಆಹಾರ ಸರಬರಾಜು ಮಾಡುವ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಗೆ ಬರುವ ಎಲ್ಲಾ ಜೊಮ್ಯಾಟೋ ಡೆಲವರಿ ಬಾಯ್ಸ್ ಒಂದಾಗಿ ಪ್ರತಿಭಟನೆ ನಡೆಸಿದ್ದಾರೆ.‌ ಕಂಪನಿಯಲ್ಲಿ ಆಗ ನೀಡುತ್ತಿದ್ದ ವೇತನ ಮತ್ತು ಕಮಿಷನ್ ಹಾಗೂ ಇನ್​ಸೆಂಟೀವ್​ಗಳನ್ನು ಬಹುತೇಕ ಕಡಿತಗೊಳಿಸಿದೆ. ಒಂದು ಡೆಲಿವರಿಗೆ ಇಂತಿಷ್ಟು ಎಂದು ನಿಗದಿಯಾಗಿದ್ದ ಹಣಕ್ಕೆ ಕಂಪನಿ ಕಮಿಷನ್​ನಲ್ಲಿ ಅರ್ಧಕ್ಕಿಂಕ ಕಡಿಮೆ ಹಣವನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಝೊಮೆಟೊ ಕಂಪನಿ ವಿರುದ್ಧ ತಿರುಗಿಬಿದ್ದ ಝೊಮೆಟೊ ಡೆಲಿವರಿ ಹುಡುಗರು

ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ಅನೇಕ ರಾಜ್ಯಗಳಿಂದ ಇಲ್ಲಿಗೆ ಇದೇ ಕೆಲಸ ಅರಸಿ ಬಂದಿರುವ ಯುವಕರು ಇದೀಗ ಕಂಪನಿಯ ನಿರ್ಧಾರಕ್ಕೆ ಆಕ್ರೋಶಗೊಂಡಿದ್ದಾರೆ. ಎಲ್ಲಾ ಯುವಕರು ಒಗಟ್ಟಾಗಿ ಎಲೆಕ್ಟ್ರಾನಿಕ್ ಸಿಟಿಯ 1ನೇ ಹಂತದಲ್ಲಿನ ಖಾಸಗಿ‌ ರೆಸ್ಟೋರೆಂಟ್ ಬಳಿ ಜೊಮ್ಯಾಟೋ ಕಂಪನಿಯ ವಿರುದ್ಧ ಘೋಷಣೆ ಕೂಗುತ್ತ ತಮ್ಮ ಆಕ್ರೋಶ ಹೊರಹಾಕಿದರು.

ABOUT THE AUTHOR

...view details