ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) :ಸಿದ್ದರಾಮಯ್ಯ ಅಲ್ಪಸಂಖ್ಯಾತರ ಟರ್ಮಿನೇಟರ್ ಎಂಬ ಹೆಚ್ಡಿಕೆ ಹೇಳಿಕೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ತಿರುಗೇಟು ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಇರುವ ಒನ್ ಪರ್ಸೆಂಟ್ ಕಾಳಜಿಯೂ ಕುಮಾರಸ್ವಾಮಿಗೆ ಇಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿರುವ ಕಾರಣಕ್ಕೆ ಅಲ್ಪಸಂಖ್ಯಾತರ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
‘ಅಲ್ಪ ಸಂಖ್ಯಾತರ ವಿರೋಧಿ ಕುಮಾರಸ್ವಾಮಿ ತಾನೇ’?
ದೆಹಲಿಯಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಚಿವ ಜಮೀರ್ ಅಹ್ಮದ್ ಮಾಧ್ಯಮದವರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಸಾಕಷ್ಟು ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಂದು ಹೋಗಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಮಾಡಿರುವಷ್ಟು ಬೇರೆ ಮುಖ್ಯಮಂತ್ರಿಗಳು ಮಾಡಿದ್ದರೆ, ದಾಖಲೆ ಸಮೇತ ತೋರಿಸಿ.
2013ಕ್ಕೂ ಮುಂಚೆ ಮೈನಾರಿಟಿ ಬಜೆಟ್ ಇದ್ದಿದ್ದು 280 ಕೋಟಿ ರೂ. ಮಾತ್ರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ 5 ವರ್ಷಗಳಲ್ಲಿ ಮೈನಾರಿಟಿ ಬಜೆಟ್ 3,150 ಕೋಟಿ ರೂ.ಗೆ ಹೆಚ್ಚಿಸಿದ್ರು. ಇಂಥ ಬಜೆಟ್ ಯಾರಾದ್ರು ಮಾಡಲು ಸಾಧ್ಯವೇ? ಎರಡು ಸಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 3,150 ಕೋಟಿ ರೂ. ಇದ್ದ ಮೈನಾರಿಟಿ ಬಜೆಟ್ ಅನ್ನು 1,800 ಕೋಟಿ ರೂ.ಗೆ ಇಳಿಸಿದ್ರು. ಇದನ್ನ ನೋಡಿದ್ರೆ ತಿಳಿಯುತ್ತೆ ಯಾರು ಅಲ್ಪಸಂಖ್ಯಾತರ ವಿರೋಧಿ ಎಂದು ಅಂತಾ ಹೆಚ್ ಡಿಕೆ ವಿರುದ್ಧ ಕಿಡಿಕಾರಿದ್ರು.
‘ಸಿಎಂ ಇಬ್ರಾಹಿಂ ದೇವೇಗೌಡರ ಕಾಲು ಹಿಡಿಯೋದು ಬಾಕಿಯಿತ್ತು’
ನಾನು ಕಣ್ಣಾರೆ ನೋಡಿದ ಘಟನೆ, 2004ರಲ್ಲಿ ಸಿಎಂ ಇಬ್ರಾಹಿಂ ನನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಪಕ್ಷಕ್ಕೆ ಒಳ್ಳೆದಾಗುತ್ತೆ ಎಂದು ದೇವೇಗೌಡರ ಕಾಲು ಹಿಡಿಯೋದು ಒಂದು ಬಾಕಿಯಿತ್ತು. ಆದರೆ, ದೇವೇಗೌಡರು ಮನಸ್ಸು ಮಾಡಿದ್ರೂ, ಕುಮಾರಸ್ವಾಮಿ ಮಾಡಲಿಲ್ಲ. ದೇವೇಗೌಡರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದೆ, ಈಗಲೂ ಇದೆ.
ದೇವೇಗೌಡರಿಗೆ ಇರೋ ಕಾಳಜಿಯ ಒಂದು ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಇಲ್ಲ. ಇಬ್ರಾಹಿಂ ಬದಲಿಗೆ ಚೆನ್ನೈ ಮೂಲದ ಎಂ ಎಂ ರಾಮಸ್ವಾಮಿಯನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ಮತ್ತೊಂದು ಬಾರಿ ಅಲ್ಪಸಂಖ್ಯಾತರನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಅವಕಾಶವಿದ್ದರೂ, ವಿಜಯಮಲ್ಯರನ್ನ ಮಾಡಿದ್ರು. ಆ ನಂತರ ಕುಪೇಂದ್ರರೆಡ್ಡಿಯವರನ್ನ ಮಾಡಿದರು. 2004ರಿಂದ ರಾಜಕೀಯಕ್ಕೆ ಬಂದ ಕುಮಾರಸ್ವಾಮಿಯವರು ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆಯ ಪಟ್ಟಿ ನೀಡಲಿ ಎಂದು ಸವಾಲೆಸೆದರು.
‘ಫಾರುಕ್ರನ್ನು ಡಿಸಿಎಂ ಮಾಡಲಿಲ್ಲ’