ಕರ್ನಾಟಕ

karnataka

ETV Bharat / state

ಆನೇಕಲ್: ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಕೊಲೆ ಶಂಕೆ - ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

ಅತ್ತಿಬೆಲೆಯ ಬಳ್ಳೂರಿನಲ್ಲಿ ಸುಟ್ಟು ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

By

Published : Aug 16, 2023, 9:55 PM IST

ಆನೇಕಲ್ : ಆನೇಕಲ್ ಉಪವಿಭಾಗ ವ್ಯಾಪ್ತಿಯ ಅತ್ತಿಬೆಲೆಯ ಬಳ್ಳೂರಿನಲ್ಲಿ ಸುಟ್ಟು ಕೊಳೆತ ಸ್ಥಿತಿಯಲ್ಲಿ ಯುವಕನ ಶವವೊಂದು ದೊರೆತಿದೆ. ಅಸ್ಸಾಂ ಮೂಲದ ತಮಿಳುನಾಡಿನ ಹೊಸೂರಿನ ಸಿಪ್ಕಾಟ್ ಕೈಗಾರಿಕಾ ಪ್ರದೇಶದ ಕಾರ್ಮಿಕ ದೀಪಕ್​ (24) ಮೃತಪಟ್ಟವರು ಎಂದು ತಿಳಿದುಬಂದಿದೆ.

ಬೇರೆಡೆ ಯುವಕನ ಕೊಲೆ‌ಗೈದು ಟಿಆರ್​ಎಸ್​ ಬಾರ್ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ. ಕಳೆದ ಸೋಮವಾರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್​ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ ಆತ್ಮಹತ್ಯೆ ಪ್ರಕರಣ: ಪತ್ನಿ ಮೃತಪಟ್ಟಿದ್ದರಿಂದ ಮನನೊಂದ ಪತಿ ಮತ್ತು ತಾಯಿ ಇಲ್ಲದ ನೆನಪಿನಲ್ಲಿ ಕೊರಗಿ ಮಗಳು ನೀರಿನ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಪ್ರತ್ಯೇಕ ಘಟನೆ ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಕಪಿಲೇಶ್ವರ ಮಂದಿರದ ನೀರಿನ ಹೊಂಡದಲ್ಲಿ ತೇಲಾಡುತ್ತಿದ್ದ ಎರಡು ಶವಗಳ ಗುರುತು ಪತ್ತೆಯಾಗಿದ್ದು, ಬೆಳಗಾವಿಯ ಕಾಂಗಲೆ ಗಲ್ಲಿಯ ನಿವಾಸಿ ವಿಜಯ್ ಪವಾರ್ (58), ಶಹಾಪುರದ ದಾನೆ ಗಲ್ಲಿಯ ಚಿತ್ರಲೇಖಾ ಶ್ರೀಕಾಂತ ಸಫಾರ್‌ (70) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಖಡೇಬಜಾರ್ ಪೊಲೀಸರು ಶವಗಳನ್ನು ಹೊಂಡದಿಂದ ಹೊರತೆಗೆದು ತನಿಖೆಗೆ ಒಳಪಡಿಸಿದ್ದರು. ಆತ್ಮಹತ್ಯೆಯ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಬೇರೆ ಬೇರೆ ಕಾರಣಕ್ಕೆ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಗೊತ್ತಾಗಿದೆ. ತಾಯಿ ನಿಧನದಿಂದ ಏಕಾಂಗಿಯಾಗಿ, ಖಿನ್ನತೆಗೆ ಒಳಗಾಗಿದ್ದ ಚಿತ್ರಲೇಖಾ ಸಫಾರ್ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಅಂತಿಮವಾಗಿ ಕೊರಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕುಡಿದ ಆಮಲಿನಲ್ಲಿ ಸ್ನೇಹಿತನ ಹತ್ಯೆ; ಆರೋಪಿ ಬಂಧನ: ಇನ್ನೊಂದೆಡೆ, ಕುಡಿದ ಅಮಲಿನಲ್ಲಿ ಯುವಕ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿತ್ತು. ರವಿಕುಮಾರ (33) ಕೊಲೆಯಾದ ಯುವಕ. ಕೊಲೆ ಮಾಡಿರುವ ಆರೋಪಿ ಹುಬ್ಬಳ್ಳಿ ಮೂಲದ ಪವನ ಕುಮಾರ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಮೃತನ ಮನೆಯ ಮಾಳಿಗೆಯ ಮೇಲೆ ಇಬ್ಬರು ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಕುಡಿದ ಮತ್ತಲ್ಲಿ ಇಬ್ಬರು ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ, ಹುಬ್ಬಳ್ಳಿ ಮೂಲದ ಪವನ ಕುಮಾರ ತನ್ನ ಸ್ನೇಹಿತ ರವಿಕುಮಾರನನ್ನು ಕೊಲೆ ಮಾಡಿದ್ದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Hubballi crime: ಹುಬ್ಬಳ್ಳಿಯಲ್ಲಿ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ; ಆರೋಪಿ ಸೆರೆ

ABOUT THE AUTHOR

...view details