ಕರ್ನಾಟಕ

karnataka

ETV Bharat / state

ಎತ್ತಿನಹೊಳೆ ಪ್ರಾಜೆಕ್ಟ್​ ಭಾರತದಲ್ಲೇ ವಿಶೇಷವೆನಿಸಿದ ನೀರಾವರಿ ಯೋಜನೆಯಾಗಿದೆ: ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಚ್ಚೇಗೌಡ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎತ್ತಿನಹೊಳೆ ಯೋಜನೆಯನ್ನ ಶೀಘ್ರವೇ ಪೂರ್ಣಗೊಳಿಸುವ ಭರವಸೆ ನೀಡಿದರು.

ಎತ್ತಿನಹೊಳೆ ಪ್ರಾಜೆಕ್ಟ್​ ಭಾರತದಲ್ಲೇ ವಿಶೇಷವೆನಿಸಿದ ನೀರಾವರಿ ಯೋಜನೆಯಾಗಿದೆ: ಸಂಸದ ಬಚ್ಚೇಗೌಡ

By

Published : Oct 12, 2019, 4:50 AM IST

ದೊಡ್ಡಬಳ್ಳಾಪುರ:ಎತ್ತಿಹೊಳೆ ಯೋಜನೆಯೂ, ಯಾವುದೇ ನದಿ ಮೂಲಗಳು ಇಲ್ಲದಿರುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಕುಡಿಯುವ ನೀರಿಗಾಗಿ ಮಾಡಿರುವ ವಿಶೇಷ ಯೋಜನೆಯಾಗಿದೆ ಎಂದು ಸಂಸದ ಬಚ್ಚೇಗೌಡ ಹೇಳಿದರು.

ಎತ್ತಿನಹೊಳೆ ಪ್ರಾಜೆಕ್ಟ್​ ಭಾರತದಲ್ಲೇ ವಿಶೇಷವೆನಿಸಿದ ನೀರಾವರಿ ಯೋಜನೆಯಾಗಿದೆ: ಸಂಸದ ಬಚ್ಚೇಗೌಡ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲೇ ಒಂದು ವಿಶೇಷವಾದ ನೀರಾವರಿ ಯೋಜನೆ ಇದಾಗಿದೆ. ಇಲ್ಲಿಯವರೆಗೂ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಅಣೆಕಟ್ಟು ಕಟ್ಟಲಾಗುತ್ತಿತ್ತು. ಆದರೆ ಹರಿಯುವ ನದಿಯನ್ನೇ ಈ ಯೋಜನೆಗೆ ತಿರುಗಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆಯನ್ನು ಕೇವಲ ಕುಡಿಯುವ ನೀರಿಗಾಗಿಯೇ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗೆ ಈಗಾಗಲೇ 8 ಸಾವಿರ ಕೋಟಿ ಹಣ ಖರ್ಚಾಗಿದೆ. ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಭಾಗದ ಜನ ಈ ಯೋಜನೆಗೆ ಭೂಮಿ ನೀಡಬೇಕಾಗಿದ್ದು, ಅವರು ತಮ್ಮ ಭಾಗಕ್ಕೆ ಹೆಚ್ಚಿನ ನೀರು ನೀಡಬೇಕು ಎಂಬ ಬೇಡಿಕೆ ಇರಿಸಿದ್ದಾರೆ. ಹೀಗಾಗಿ ಯೋಜನೆ ಜಾರಿಯಲ್ಲಿ ವಿಳಂಬವಾಗಿದೆ. ಅದರಿಂದ ಭದ್ರಾ ನೀರನ್ನು ಹೇಮಾವತಿಗೆ ಹರಿಸುವ ಮೂಲಕ ಈ ಭಾಗದ ಜನರು ಎತ್ತಿನಹೊಳೆ ಯೋಜನೆಗೆ ತಡೆ ಮಾಡದಂತೆ ಇರಲು ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಸಹ ಎತ್ತಿನಹೊಳೆ ಯೋಜನಗೆ ಸಹಕಾರ ನೀಡಲಿದೆ ಎಂದರು.

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬರಿದಾಗಿದ್ದ ಜಕ್ಕಲಮಡಗು ಡ್ಯಾಂಗೆ ನೀರು ಬಂದಿದ್ದು ಒಂದು ವರ್ಷಕ್ಕೆ ಅವಳಿ ನಗರಗಳಿಗೆ ಸಾಕಾಗುವಷ್ಟು ನೀರು ಸಂಗ್ರಹವಾಗಿದೆ. ಆದರೆ ಜಕ್ಕಲಮಡಗು ಡ್ಯಾಂ ನೀರಿನಲ್ಲಿ ಶೇಕಡಾ 60 ರಷ್ಟು ನೀರು ಚಿಕ್ಕಬಳ್ಳಾಪುರ ನಗರಕ್ಕೆ ಸರಬರಾಜು ಆಗುತ್ತಿದ್ದು ಶೇಕಡಾ 40 ರಷ್ಟು ದೊಡ್ಡಬಳ್ಳಾಪುರ ನಗರಕ್ಕೆ ಸರಬರಾಜು ಆಗುತ್ತಿದೆ. ಈ ಒಪ್ಪಂದಕ್ಕೆ ದೊಡ್ಡಬಳ್ಳಾಪುರ ನಾಗರಿಕರ ವಿರೋಧವಿದೆ. ಶೇಕಡಾ 70 ರಷ್ಟು ಜಕ್ಕಲಮಡಗುವಿನ ಜಲಾಯನ ಪ್ರದೇಶ ದೊಡ್ಡಬಳ್ಳಾಪುರದಲ್ಲಿದೆ. ಅಣೆಕಟ್ಟು ಮಾತ್ರ ಚಿಕ್ಕಬಳ್ಳಾಪುರ ತಾಲೂಕಿನಲ್ಲಿದೆ. ಹಾಗೆಯೇ ದೊಡ್ಡಬಳ್ಳಾಪುರ ನಗರದ ಜನಸಂಖ್ಯೆ 1 ಲಕ್ಷದ 20 ಸಾವಿರ ಚಿಕ್ಕಬಳ್ಳಾಪುರದ ಜನಸಂಖ್ಯೆ 70 ಸಾವಿರ. ಅತಿ ದೊಡ್ಡನಗರವಾದ ದೊಡ್ಡಬಳ್ಳಾಪುರಕ್ಕೆ ಹೆಚ್ಚು ನೀರು ಸರಬರಾಜು ಆಗಬೇಕಿದೆ. ಹೀಗಾಗಿ ಮುಂದೆ ಜನಸಂಖ್ಯೆ ಆಧಾರದ ಮೇಲೆ ನೀರು ಹಂಚಿಕೆಯಾಗಬೇಕು. ಈ ಬಗ್ಗೆ ಚರ್ಚಿಸುವುದ್ದಾಗಿ ಸಂಸದರು ತಿಳಿಸಿದರು.

ABOUT THE AUTHOR

...view details