ಕರ್ನಾಟಕ

karnataka

ETV Bharat / state

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ.. ಸಿಲಿಕಾನ್ ಸಿಟಿಗೆ ‘ಯಲೋ ಅಲರ್ಟ್’ - Banglore Rain updates

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಾನ್ಸೂನ್ ಆ್ಯಕ್ಟೀವ್ ಆಗಿದ್ದು, ನಗರದ ಹಲವೆಡೆ ಮಳೆಯಾಗಲಿದೆ. ಸಿಲಿಕಾನ್ ಸಿಟಿ ಜನರಿಗೆ ಹವಾಮಾನ ಇಲಾಖೆ ‘ಯಲೋ ಅಲರ್ಟ್’ ನೀಡಿದ್ದು, ಮುಂದಿನ 4 ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಸಿಲಿಕಾನ್ ಸಿಟಿಗೆ ‘ಯಲೋ ಅಲರ್ಟ್’

By

Published : Sep 23, 2019, 5:47 PM IST

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಹವಾಮಾನ ಇಲಾಖೆ ‘ಯಲೋ ಅಲರ್ಟ್’ ನೀಡಿದೆ. ಮುಂದಿನ 4 ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 27ರಿಂದ 28ರವರೆಗೆ 4-5 ದಿನಗಳ ಕಾಲ ಬೆಂಗಳೂರು ಸೇರಿ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಾನ್ಸೂನ್ ಆ್ಯಕ್ಟೀವ್ ಆಗಿದ್ದು, ನಗರದ ಹಲವೆಡೆ ಮಳೆಯಾಗಲಿದೆ. ಇಂದು ಬೆಳಗ್ಗೆಯಿಂದಲೇ ಬೆಂಗಳೂರು ಉತ್ತರ ಭಾಗಗಳಲ್ಲಿ 30 ಮಿಲಿ ಮೀಟರ್ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ದೇವನಹಳ್ಳಿಯಲ್ಲಿ ಗಾಳಿ ಸಹಿತ ಭಾರೀ ಮಳೆ..

ದೇವನಹಳ್ಳಿಯಲ್ಲಿ ಗಾಳಿ ಸಹಿತ ಭಾರೀ ಮಳೆ :

ಮಳೆಗಾಲ ಶುರುವಾಗಿ ತಿಂಗಳು ಕಳೆದರೂ ಸರಿಯಾಗಿ ಮಳೆಯಾಗದೇ ರೈತರು ಕಂಗಲಾಗಿದ್ದರು. ವಾರಕ್ಕೊಮ್ಮೆ ಬಂದು ಹೋಗಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಮಳೆರಾಯ ನಿನ್ನೆಯಿಂದ‌ ಎಡೆಬಿಡದೆ ಸುರಿಯಲಾರಂಭಿಸಿದ್ದಾನೆ. ಗಾಳಿ, ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ರೈತರು ಸಂತಸಗೊಂಡಿದ್ದಾರೆ.

ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಒಣಗಿದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ. ಭಾರಿ ಮಳೆಯಿಂದಾಗಿ ಕೆಲವು ಕಡೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತಾದರೂ ಅನ್ನದಾತನಿಗೆ ಮಾತ್ರ ಮಳೆ ನೆಮ್ಮದಿ ತಂದಿದೆ.

ABOUT THE AUTHOR

...view details