ಕರ್ನಾಟಕ

karnataka

ETV Bharat / state

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಜಿರಾಫೆ ದಿನಾಚರಣೆ - ಫಜಲ್ ಫೀಡರ್

ಜಿರಾಫೆಗಳಿಗೆ ಹೊಸ ಮಾದರಿಯಲ್ಲಿ ಆಹಾರ ನೀಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಜಿರಾಫೆ ದಿನವನ್ನು ಆಚರಿಸಲಾಯಿತು

World Giraffe Day
ವಿಶ್ವ ಜಿರಾಫೆ ದಿನಾಚರಣೆ

By

Published : Jun 23, 2021, 7:40 AM IST

ಆನೇಕಲ್:ಪ್ರತಿ ವರ್ಷ ಒಂದು ದಿನ ದೀರ್ಘ ಹಗಲು ಇರುವುದರಿಂದ, ಅಂದು ಅತಿ ಎತ್ತರದ ಪ್ರಾಣಿಯಾದ ಜಿರಾಫೆಯನ್ನು ಆಧರಿಸುವ ನಿಟ್ಟಿನಲ್ಲಿ 'ವಿಶ್ವ ಜಿರಾಫೆ ದಿನ' ಆಚರಿಸಲಾಗುತ್ತದೆ.

ಬನ್ನೆರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ ದಿನದ ಅಂಗವಾಗಿ ಗೌರಿ ಮತ್ತು ಯಧುನಂದನ್ ಜಿರಾಫೆಗಳಿಗೆ ಹೊಸ ಮಾದರಿಯಲ್ಲಿ (ಫಜಲ್ ಫೀಡರ್) ಆಹಾರ ನೀಡಲಾಯಿತು.

ಹೊಸ ಮಾದರಿಯಲ್ಲಿ ಆಹಾರ ಸೇವಿಸಿದ ಜಿರಾಫೆಗಳು

ಜಿರಾಫೆಗಳಿಗೆ ಸುಮಾರು 18 ರಿಂದ 20 ಇಂಚಿನಷ್ಟು ಉದ್ದದ ನಾಲಿಗೆಯಿದೆ. ಆಹಾರ ಪದಾರ್ಥಗಳನ್ನು ಸುಲಭವಾಗಿ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿವೆ.

ಇದನ್ನು ಉತ್ತೇಜಿಸುವ ಸಲುವಾಗಿ ಬಿದಿರಿನ ತುಂಡಿನಲ್ಲಿ ರಂಧ್ರಗಳನ್ನು ಮಾಡಿ, ಅದರೊಳಗೆ ಕ್ಯಾರೇಟ್, ಗೆಣಸು, ಸೇಬು, ಈರುಳ್ಳಿ ಮತ್ತು ಹಸಿರು ಎಲೆಗಳನ್ನು ತುಂಬಿಸಿ ಇಡಲಾಗಿತ್ತು.

ಫಜಲ್ ಫೀಡರ್

ಗೌರಿ ಮತ್ತು ಯದುನಂದನ್ ಬಹಳ ಉತ್ಸಾಹದಿಂದ ಫಜಲ್ ಫೀಡರ್‌ನಿಂದ ಅಹಾರವನ್ನು ಸೇವಿಸಿದವು. ಆ ಮೂಲಕ ವಿಶ್ವ ಜಿರಾಫೆ ದಿನವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ಆಚರಿಸಿದರು.

ವರ್ಷದ ದೀರ್ಘ ದಿನ ಮತ್ತು ಜಿರಾಫೆ ದಿನ :ಪ್ರತಿ ವರ್ಷದ ಬೇಸಿಗೆಯಲ್ಲಿ ಒಂದು ದಿನ ದೀರ್ಘ ಹೊತ್ತು ಹಗಲು ಇರುವುದರಿಂದ ಅದನ್ನು ಬೇಸಿಗೆಯ ದೀರ್ಘ ದಿನ (Summer Solstice) ಎಂದು ಕರೆಯುತ್ತಾರೆ. ಈ ದಿನದಂದು ಬೇಗ ಸೂರ್ಯೋದಯವಾಗಿ ತಡವಾಗಿ ಸೂರ್ಯಸ್ತವಾಗುತ್ತದೆ.

ಸೂರ್ಯನು ಕಾಲ್ಪನಿಕ ಉಷ್ಣವಲಯ ಅಥವಾ ಕರ್ಕಾಟಕ ವೃತ್ತ (Tropic of Cancer ) 23.5 ಡಿಗ್ರಿ ( N) ಅಕ್ಷಾಂಶದ ಮೇಲೆ ನೇರವಾಗಿ ಬೀಳುವುವಾಗ ಈ ದಿನ ಸಂಭವಿಸುತ್ತದೆ. ಇದನ್ನು ಅಯನ ಸಂಕ್ರಾತಿ ಎಂದೂ ಕರೆಯುತ್ತಾರೆ.

ಜಿರಾಫೆ ಪ್ರಾಣಿಗಳಲ್ಲಿ ಅತೀ ಎತ್ತರದ, ದೊಡ್ಡ ಕತ್ತುಳ್ಳ ಮತ್ತು ಉದ್ದದ ಕಾಲುಗಳ ಪ್ರಾಣಿಯಾಗಿರುವುದರಿಂದ, ವರ್ಷದ ದೀರ್ಘ ದಿನದಂದು ದೊಡ್ಡ ಪ್ರಾಣಿಯ ದಿನಾಚರಣೆ (World Giraffe Day ) ಮಾಡಲಾಗುತ್ತದೆ. ಈ ವರ್ಷ ಜೂನ್ 21 ರಂದು ದೀರ್ಘ ದಿನವಾದ್ದರಿಂದ, ಅಂದು ಜಿರಾಫೆ ದಿನ ಆಚರಿಸಲಾಗಿದೆ.

ಇದನ್ನೂಓದಿ : ಸಿಂಗನಾಯಕನಹಳ್ಳಿ ಕೆರೆ ಪುನಶ್ಚೇತನಕ್ಕೆ 6,316 ಮರಗಳಿಗೆ ಕೊಡಲಿ; ಪರಿಸರ ಪ್ರೇಮಿಗಳ ವಿರೋಧ

ABOUT THE AUTHOR

...view details