ಕರ್ನಾಟಕ

karnataka

ETV Bharat / state

ರೇಷ್ಮೆ ತ್ಯಾಜ್ಯದಿಂದ ಅಲಂಕಾರಿಕ ಹೂಗುಚ್ಛ... ಹಿಪ್ಪುನೇರಳೆ ಸೊಪ್ಪಿನ ಆರೋಗ್ಯ ವರ್ಧಕ ಮಲ್ಬರಿ ಟೀ - Yelahanka GKVK Agricultural University

ಬೆಂಗಳೂರಿನ ಖ್ಯಾತ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತ್ಯಾಜ್ಯವಾಗಿ ನಾಶವಾಗುತ್ತಿದ್ದ ರೇಷ್ಮೆ ಗೂಡುಗಳಿಂದ ಬಣ್ಣ ಬಣ್ಣದ ಹೂಗುಚ್ಛ, ಹಾರಗಳನ್ನು ತಯಾರಿಸುತ್ತಾರೆ. ಹಾಗೂ ಆರೋಗ್ಯ ವರ್ಧಕ ಹಿಪ್ಪುನೇರಳೆ ಸೊಪ್ಪಿನಿಂದ ಆರೋಗ್ಯ ವರ್ಥಕ ಮಲ್ಬರಿ ಟೀ, ಪಕೋಡಾ, ಬಿಸ್ಕತ್ತು ಸಹ ತಯಾರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

wonderful-bouquet-from-waste-silk-nest-dot-mulberry-tea-for-healthy
ತ್ಯಾಜ್ಯ ರೇಷ್ಮೆ ಗೂಡಿನಿಂದ ಅಲಂಕಾರಿಕ ಹೂಗುಚ್ಛ.. ಹಿಪ್ಪುನೇರಳೆ ಸೊಪ್ಪಿನ ಆರೋಗ್ಯ ವರ್ಧಕ ಮಲ್ಬರಿ ಟೀ

By

Published : Nov 13, 2020, 9:38 AM IST

Updated : Nov 13, 2020, 9:47 AM IST

ಯಲಹಂಕ:ಅದೆಷ್ಟೋ ನೈಸರ್ಗಿಕ ಉತ್ಪನ್ನಗಳ ಪ್ರಕೃತಿಯೇ ಸುಂದರ. ಯಾಕಂದ್ರೆ ಪ್ರಕೃತಿಯಿಂದ ದೊರಕುವ ಯಾವುದೇ ವಸ್ತುವಿನಿಂದ ವಿಭಿನ್ನ ಲಾಭಗಳಿರುತ್ತವೆ. ಅದರಲ್ಲಿ ನಮಗೆ ಅನುಪಯುಕ್ತ ಎನಿಸುವ ತ್ಯಾಜ್ಯವೂ ಉಪಯುಕ್ತ ವಸ್ತುವಾಗಿ ಕೊನೆಗೊಳ್ಳುತ್ತದೆ. ಅದಕ್ಕೆ ಉತ್ತಮ ನಿದರ್ಶನ ಕೃಷಿ ಉತ್ಪನ್ನವಾದ ರೇಷ್ಮೆ. ಇದರಿಂದ ಸುಂದರವಾದ ಬಟ್ಟೆ ತಯಾರಿಸುವುದರ ಜೊತೆಗೆ ತ್ಯಾಜ್ಯ ಎಂದು ಎಸೆಯಲಾಗುತ್ತಿದ್ದ ಅದರ ಗೂಡು, ರೇಷ್ಮೆ ಬೆಳೆಯಲು ಬಳಸುವ ಮಲ್ಬೇರಿ ಎಲೆಯನ್ನು ಹೇಗೆಲ್ಲಾ ಬಳಸಲಾಗುತ್ತೆ ಗೊತ್ತಾ?.

ತ್ಯಾಜ್ಯ ರೇಷ್ಮೆ ಗೂಡಿನಿಂದ ಅಲಂಕಾರಿಕ ಹೂಗುಚ್ಛ.. ಹಿಪ್ಪುನೇರಳೆ ಸೊಪ್ಪಿನ ಆರೋಗ್ಯ ವರ್ಧಕ ಮಲ್ಬರಿ ಟೀ..!!

ತ್ಯಾಜ್ಯವಾಗಿ ನಾಶವಾಗುತ್ತಿದ್ದ ರೇಷ್ಮೆ ಗೂಡುಗಳಿಗೆ ಮರು ಜೀವ ನೀಡಿ, ಸುಂದರವಾದ ರೂಪ ನೀಡುವ ಕೆಲಸ ಮಾಡಿರುವುದು ಬೆಂಗಳೂರಿನ ಖ್ಯಾತ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.

ಇವರು ನೂಲು ತೆಗೆಯಲು ಯೋಗ್ಯವಲ್ಲದ ತ್ಯಾಜ್ಯ ರೇಷ್ಮೆ ಗೂಡುಗಳಿಂದ ಬಣ್ಣ ಬಣ್ಣದ ಹೂಗುಚ್ಛ, ಹಾರಗಳನ್ನು ತಯಾರಿಸುತ್ತಾರೆ. ಅವುಗಳನ್ನು ತಯಾರಿಸಲು ಬೇಕಾಗುವ ಇತರ ಸಾಮಗ್ರಿಗಳು ಕೂಡ ಇತರ ತ್ಯಾಜ್ಯಗಳೇ ಆಗಿರುತ್ತವೆ ಎನ್ನುವುದು ಮತ್ತೊಂದು ವಿಶೇಷ. ಟೊಮೇಟೊ ಬೆಳೆಯಲ್ಲಿ ಬಳಸಿದ ಪ್ಲಾಸ್ಟಿಕ್‌ ವೈರ್‌ಗಳು, ಹಿಪ್ಪುನೇರಳೆ ಕಡ್ಡಿಗಳು, ಬಿದಿರಿನ ಬೊಂಬುಗಳು ಹಾಗೂ ಇನ್ನಿತರ ಕೃಷಿ ತ್ಯಾಜ್ಯಗಳನ್ನು ಬಳಸಿಕೊಳ್ಳಲಾಗುತ್ತದೆ. ಕೃಷಿ ಮೇಳಕ್ಕೆ ಬಂದಿದ್ದವರನ್ನು ತನ್ನತ್ತ ಸೆಳೆಯುತ್ತಿದ್ದ ಈ ಬಣ್ಣ ಬಣ್ಣದ ಹೂವುಗಳು ಕನಿಷ್ಠ ಎಂದರೂ 3-4 ವರ್ಷ ಬಣ್ಣ ಮಾಸದೇ ಸುಂದರವಾಗಿ ತೋರುತ್ತವೆ. ಇವುಗಳ ಬಳಕೆಯಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ. ರೇಷ್ಮೆ ಬೆಳೆಗಾರರು ಇದನ್ನು ಉಪಕಸುಬನ್ನಾಗಿ ನಡೆಸಿಕೊಂಡು ಹೋದರೆ ಕೈತುಂಬಾ ಲಾಭಪಡೆಯಬಹುದು.

ರೇಷ್ಮೆ ಹುಳುಗಳ ಪ್ರಮುಖ ಆಹಾರ ಹಿಪ್ಪು ನೇರಳೆ ಸೊಪ್ಪು. ಈ ಸೊಪ್ಪು ಬಹಳ ಉಪಯುಕ್ತವಾಗಿದ್ದು, ಇದರ ಎಲೆಗಳಿಂದ ಟೀ, ಪಕೋಡಾ, ಬಿಸ್ಕತ್ತು ಸಹ ತಯಾರಿಸಬಹುದು. ಹಿಪ್ಪುನೇರಳೆ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ನೈಸರ್ಗಿಕ ಪಾನೀಯವಾಗಿ ಮಲ್ಬರಿ ಚಹಾ ಸೇವಿಸಬಹುದು. ಹಸುವಿನ ಹಾಲಿಗಿಂತ ಶೇ. 25 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದರಲ್ಲಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ ಮಧುಮೇಹವನ್ನೂ ಇದರಿಂದ ನಿಯಂತ್ರಿಸಬಹುದು. ಏಕೆಂದರೆ, ಇದು ದೇಹದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡುತ್ತದೆ. ಜೊತೆಗೆ, ಸಕ್ಕರೆ ಪ್ರಮಾಣವನ್ನೂ ನಿಯಂತ್ರಣದಲ್ಲಿಡುತ್ತದೆ. ರಕ್ತ ಸಂಚಲನೆ ಕೂಡ ಸರಾಗವಾಗುತ್ತದೆ. ಮೂಳೆಗಳ ಆರೋಗ್ಯ ಸುಧಾರಿಸುತ್ತದೆ ಅಲ್ಲದೆ, ದಂತ ಸುರಕ್ಷತೆ ಹೆಚ್ಚಿಸುತ್ತದೆ.

ಥಾಯ್ಲೆಂಡ್‌, ಚೀನಾ, ಜಪಾನ್‌ನಲ್ಲಿ ಹರ್ಬಲ್‌ ಟೀ ಎಂದೇ ಮಲ್ಬರಿ ಟೀ ಹೆಚ್ಚು ಪ್ರಸಿದ್ಧಿಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಇದನ್ನು ಬಳಸುತ್ತಿದ್ದಾರಾದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಮಹತ್ವ ಇನ್ನೂ ಅರಿವಿಗೆ ಬಂದಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಔಷಧ ತಯಾರಿಕಾ ಕಂಪನಿಗಳು, ವೈದ್ಯಕೀಯ ಕಂಪನಿಗಳು ಹಿಪ್ಪುನೇರಳೆ ಸೊಪ್ಪಿನಿಂದ ಹೊಸ ಹೊಸ ಉತ್ಪನ್ನ ತಯಾರಿಕೆಗೆ ಮುಂದಾಗ ಬೇಕು. ಹಿಪ್ಪುನೇರಳೆ ಎಲೆಗಳಲ್ಲಿನ ಗಂಜಿ ಅಂಶ ತೆಗೆಯುವುದು ಅದನ್ನು ಸಂಸ್ಕರಣೆ ಮಾಡಲು, ಪ್ಯಾಕೇಜ್‌, ಮಾರ್ಕೆಟಿಂಗ್‌ ಬಗ್ಗೆ ಬೆಳೆಗಾರರಿಗೆ ಮಾರ್ಗದರ್ಶನ ನೀಡಿ, ಅವರೊಂದಿಗೆ ಕೈಜೋಡಿಸಿದರೆ, ಅವರಿಗೂ ಲಾಭದಾಯಕ ಉದ್ಯಮವಾಗಿ ಕೈ ಹಿಡಿಯಲಿದೆ.

Last Updated : Nov 13, 2020, 9:47 AM IST

ABOUT THE AUTHOR

...view details