ಕರ್ನಾಟಕ

karnataka

ETV Bharat / state

ಮಹಿಳೆಯರ ಸಿದ್ದ ಉಡುಪು ಕಳ್ಳತನ ಪ್ರಕರಣ: ಆರೋಪಿ ಅಂದರ್​ - undefined

ಸಾನ್ವಿ ಇಂಡಸ್ಟ್ರೀಸ್​ ಎಂಬ ಕಂಪೆನಿಯಲ್ಲಿ ಸುಮಾರು 27 ಲಕ್ಷ ಮೌಲ್ಯದ ಮಹಿಳಾ ಸಿದ್ದ ಉಡುಪುಗಳನ್ನು ಕಳ್ಳತನ ಮಾಡಿದ್ದು, ಶೀಘ್ರ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಯನ್ನುಬಂಧಸಿದ್ದಾರೆ.

ಆರೋಪಿ ಅಂದರ್​

By

Published : Mar 24, 2019, 10:30 PM IST

ದೊಡ್ಡಬಳ್ಳಾಪುರ:ಮಹಿಳೆಯರ ಸಿದ್ದ ಉಡುಪು ಫ್ಯಾಕ್ಟರಿಯಲ್ಲಿ ಕಳ್ಳತನ ಮಾಡಿದ ಆರೋಪಿ‌ಗಳನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ ಮಹಿಳೆಯರ ಸಿದ್ಧ ಉಡುಪು ವಶಪಡಿಸಿಕೊಂಡಿದ್ದಾರೆ.

ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿತ ಆರೋಪಿ. ದೊಡ್ಡಬಳ್ಳಾಪುರ ಹೊರವಲಯದ ಕೆಸಿಪಿ ಸರ್ಕಲ್ ಬಳಿಯ ಸಾನ್ವಿ ಇಂಡಸ್ಟ್ರೀಸ್​ನಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಹೆಚ್. ಆರ್. ಕೃಷ್ಣಮೂರ್ತಿ ದೊಡ್ಡ ಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ವನ್ನು ದಾಖಲು ಮಾಡಿದ್ದರು. ಮುಂಬೈ ಮೂಲದ ರಾಥೋಡ್ ಎಂಬುವವರು ಸಾನ್ವಿ ಇಂಡಸ್ಟ್ರೀಸ್ ಮಾಲೀಕರಾಗಿದ್ದು, ವೈಸ್ ಪ್ರೆಸಿಡೆಂಟ್ ಆಗಿ ತಮಿಳುನಾಡಿನ ರವಿಕುಮಾರ್ ಕಂಪನಿಯನ್ನು ನೋಡಿಕೊಳ್ಳುತ್ತಿದ್ದರು.

ಆರೋಪಿ ಅಂದರ್​

ಫೆಬ್ರವರಿ ತಿಂಗಳಲ್ಲಿ ಸ್ವಾನಿ ಇಂಡಸ್ಟ್ರೀಸ್​ಗೆ ಪಂಜಾಬ್ ನಿಂದ 70 ಬಾಕ್ಸ್ ಮಹಿಳೆಯರ ಸಿದ್ದ ಉಡುಪುಗಳ ಬಾಕ್ಸ್ ಬಂದಿರುತ್ತದೆ. ದಿ.19ರಂದು ಕಂಪನಿಗೆ ರಜೆ ಇದ್ದರಿಂದ ದಿ.20ರಂದು ಮಹಡಿಯಲ್ಲಿಟ್ಟದ್ದ ಮಹಿಳೆ‌ಯರ ಸಿದ್ಧ ಉಡುಪುಗಳ 70 ಬಾಕ್ಸ್ ನಾಪತ್ತೆ‌ಯಾಗಿರುತ್ತದೆ. ಇದರ ಮಾರುಕಟ್ಟೆ ಮೌಲ್ಯ 27 ಲಕ್ಷ ಇದೆ. ಕಂಪನಿಯ ಹೆಚ್ಆರ್ ಆಗಿರುವ ಕೃಷ್ಣಮೂರ್ತಿ ಅಕೌಂಟ್ ಪುನೀತ್, ಗೋವಿಂದ ರಾಜ್ ಮತ್ತು ಎಲೆಕ್ಟ್ರಿಶಿಯನ್ ಹೆಚ್ಆರ್ ಗೋವಿಂದ ಮತ್ತು ಸೆಕ್ಯೂರಿಟಿ ಗಾರ್ಡ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆ ನಡೆಸಿದ ಪೂಲೀಸರು ಕಳವು ಪ್ರಕರಣದ ಪ್ರಮುಖ ಆರೋಪಿ ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುನೀತ್, ಗೋವಿಂದ್‌ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್​ಗೆ ಕುಮ್ಮಕ್ಕು ನೀಡಿ ರವಿಕುಮಾರ್ ಕಳ್ಳತನ ಮಾಡಿಸಿದ್ದ. ಕಳ್ಳತನ ಮಾಡಿದ ವಸ್ತುಗಳನ್ನು ಮುತ್ತು‌ಕುಮಾರ್ ಅಂಗಡಿಗೆ 6 ಲಕ್ಷಕ್ಕೆ ಮಾರಾಟ ಮಾಡಿದ್ದ ಸುಮಾರು 27 ಲಕ್ಷ ಮೌಲ್ಯದ ಮಹಿಳೆಯರ ಒಳ ಉಡುಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಾರು ಈ ರವಿಕುಮಾರ್ ?

ಈತ ತಮಿಳುನಾಡಿನ ಕೊಯಮತ್ತೂರು ಬಳಿಯ ಸಿಂಗಾನಲ್ಲೂರಿನವನು. ಸದ್ಯ ಬೆಂಗಳೂರಿನ ಜೆಪಿ ನಗರದ ವಾಸಿಸುತ್ತಿದ್ದಾನೆ. ಎಂಬಿಎ ಓದಿರುವ ಈತ ಕೆನಡಾ, ಸಿಂಗಪುರ, ಜಪಾನ್ ದೇಶಗಳಲ್ಲಿ ಕೆಲಸ ಮಾಡಿದ್ದ. ಕಳೆದ 8 ತಿಂಗಳ ಹಿಂದೆಯಷ್ಟೇ ಸಾನ್ವಿ ಇಂಡಸ್ಟ್ರೀಸ್​ಗೆ ವೈಸ್ ಪ್ರೆಸಿಡೆಂಟ್ ಆಗಿ ಕೆಲಸಕ್ಕೆ ಸೇರಿದ್ದನು. ಬಾಂಬೆಯಲ್ಲಿರುವ ಕಂಪನಿ ಮಾಲೀಕರ ಮನಗೆದ್ದು, ಕಂಪನಿಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದನು. ಮಾಲೀಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ರವಿಕುಮಾರ್ ಫೆ.19ರಂದು ಕಂಪನಿಗೆ ರಜೆ ಇದ್ದಿದ್ದರಿಂದ ಕಂಪನಿ ಉದ್ಯೋಗಿಗಳಾದ ಪುನೀತ್,ಗೋವಿಂದ ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಕಳ್ಳತನ ಮಾಡಿಸಿ ಮುತ್ತು‌ಕುಮಾರ್ ಎಂಬುವವರಿಗೆ ಮಾರಾಟ ಮಾಡಿದ್ದನು.

ಪ್ರಕರಣ ಕುರಿತು ಶೀಘ್ರ ತನಿಖೆ ನಡೆಸಿದ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details