ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ - ತುಮಕೂರು ರಸ್ತೆಯಲ್ಲಿ ಅಪಘಾತ

ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದು, ವೈದ್ಯರ ವಿರುದ್ಧ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿದೆ.

woman died who injured in a accident
ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತಳ ಸಂಬಂಧಿಕರು

By

Published : May 4, 2021, 8:35 AM IST

ನೆಲಮಂಗಲ: ಬೈಕ್ ಮತ್ತು ಕ್ಯಾಂಟರ್​ ನಡುವೆ ಡಿಕ್ಕಿ ಸಂಭವಿಸಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರುಕ್ಸಾನಾ (23) ಮೃತ ಮಹಿಳೆ. ಈಕೆ ನೆಲಮಂಗಲದ ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಆಸ್ಪತ್ರೆಗೆ ದಾಖಲಾಗಿದ್ದರು. ರುಕ್ಸಾನಾ ಮೂಲತಃ ತ್ಯಾಮಗೊಂಡ್ಲು ನಿವಾಸಿಯಾಗಿದ್ದು, ಬೆಂಗಳೂರಿನ ಪೀಣ್ಯ ಬಳಿಯ ಹೆಗ್ಗನ ಹಳ್ಳಿಯಲ್ಲಿ ವಾಸವಾಗಿದ್ದರು.

ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತಳ ಸಂಬಂಧಿಕರು

ಇದನ್ನೂಓದಿ : ಕೊರೊನಾ ಟೆಸ್ಟ್​ ನೆಪ ಹೇಳಿ ಕರೆತಂದ: ನಂಬಿ ಬಂದ ಹೆಂಡ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿದ ಗಂಡ

ಸೋಮವಾರ ಬೆಳಗ್ಗೆ ಅಣ್ಣನ ಮಗನ ಜೊತೆಗೆ ತ್ಯಾಮಗೊಂಡ್ಲುಗೆ ಹೋಗಿ ಹೆಗ್ಗನಹಳ್ಳಿಗೆ ಹಿಂತಿರುಗುವಾಗ ಜಾಸ್ ಟೋಲ್ ಬಳಿ ಅಪಘಾತ ಸಂಭವಿಸಿದೆ. ಡಿಯೋ ಸ್ಕೂಟರ್​ನಲ್ಲಿ ಸಂಚರಿಸುತ್ತಿದ್ದ ರುಕ್ಸಾನಾಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಾಗೊಂಡಿದ್ದ ರುಕ್ಸಾನಾಳನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ರುಕ್ಸಾನ ಕ್ಷೇಮವಾಗಿದ್ದಾರೆಂದು ತಿಳಿಸಿ ಹಣ ಕಟ್ಟವಂತೆ ಹೇಳಿದ್ದರು. ಆದರೆ, ಹಣ ಕಟ್ಟಲು ಸಮಯ ಬೇಕು ಎಂದಾಗ ವೈದ್ಯರು ಚಿಕಿತ್ಸೆ ನೀಡದೆ ರುಕ್ಸಾನಾಳ ಸಾವಿಗೆ ಕಾರಣವಾಗಿದ್ದರೆಂದು ಮೃತಳ ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details