ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ.. ಸ್ಥಳದಲ್ಲೇ ಮಹಿಳೆ ಸಾವು - ಮಹಿಳೆ ಸಾವು

ಸ್ಕೂಟಿ ಮತ್ತು ಟ್ಯಾಂಕರ್ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪಲ್ಲವಿ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ

By

Published : Feb 25, 2019, 2:01 PM IST

ದೊಡ್ಡಬಳ್ಳಾಪುರ: ಸ್ಕೂಟಿ ಮತ್ತು ಟ್ಯಾಂಕರ್ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟಿಯಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ

ನೆಲಮಂಗಲ ರಸ್ತೆಯ ಕಾಡನೂರು ಕೈಮರ ಬಳಿಯ ರೈ ಕಾಲೇಜ್ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಪಲ್ಲವಿ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟದ್ದು, ಮಹಾಲಕ್ಷ್ಮಿ ಎಂಬುವವರಿಗೆ ಗಂಭೀರ ಗಾಯಾಗಳಾಗಿವೆ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಲ್ಲವಿ ಅವರು ದೊಡ್ಡಬಳ್ಳಾಪುರದಿಂದ ನೆಲಮಂಗಲ ಕಡೆಗೆ ಸ್ಕೂಟಿಯಲ್ಲಿ ಹೊರಟಿದರು ಎನ್ನಲಾಗಿದ್ದು, ರೈ ಕಾಲೇಜ್ ಬಳಿಯ ತಿರುವಿನಲ್ಲಿ ಟ್ಯಾಂಕರ್ ಟ್ರಕ್​ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಸ್ಕೂಟಿಯ ಮುಂಬದಿ ಕುಳಿದಿದ್ದ ಪಲ್ಲವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟ್ಯಾಂಕರ್ ಟ್ರಕ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ನಡೆದಿದೆ.

ABOUT THE AUTHOR

...view details