ಕರ್ನಾಟಕ

karnataka

ETV Bharat / state

ಗಂಡನ ಅಗಲಿಕೆ ನೋವು ತಾಳಲಾರದೇ ಮಗನೊಂದಿಗೆ ರೈಲಿಗೆ ತಲೆಕೊಟ್ಟು ಮಹಿಳೆ ಆತ್ಮಹತ್ಯೆ - nelamangala latest crime news

ಗಂಡನ ಅಗಲಿಕೆಯ ನೋವು ತಾಳಲಾರದೇ ಮಹಿಳೆಯೊಬ್ಬರು ತನ್ನ 21 ವರ್ಷದ ಮಗನೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.

woman commit suicide with her son in railway track
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

By

Published : Apr 16, 2021, 5:43 PM IST

ನೆಲಮಂಗಲ: ಗಂಡನ ಸಾವಿನಿಂದ ಮನನೊಂದಿದ್ದ ಹೆಂಡತಿ ಮಗನ ಜೊತೆಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೆಲಮಂಗಲ ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೆಂಗಳೂರು -ಹುಬ್ಬಳ್ಳಿ ರೈಲಿಗೆ ಸಿಲುಕಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದುರ್ದೈವಿಗಳನ್ನು ಮನೋಜ್( 21) ರೇಖಾ (38) ಗುರುತಿಸಲಾಗಿದೆ. ಮೃತರು ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದವರು.

ಇತ್ತೀಚೆಗೆ ರೇಖಾರ ಪತಿ ಮರಣ ಹೊಂದಿದ ಹಿನ್ನೆಲೆ ಮನನೊಂದು ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details