ಕರ್ನಾಟಕ

karnataka

ETV Bharat / state

ಗೃಹ ಪ್ರವೇಶಕ್ಕೂ ಮುನ್ನ ಕಳ್ಳರ ಪ್ರವೇಶ:1.5 ಲಕ್ಷ ಮೌಲ್ಯದ ವೈರಿಂಗ್ ಕೇಬಲ್ ಕಳ್ಳತನ

ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ 1.5 ಲಕ್ಷ ರೂ ಮೌಲ್ಯದ ವೈರಿಂಗ್ ಕೇಬಲ್ ಕಳ್ಳತನ ಮಾಡಿರುವ ಘಟನೆ ತಾಲೂಕಿನ ತಿರುಮಗೊಂಡನಹಳ್ಳಿ ಹೊರವಲಯದಲ್ಲಿ ನಡೆದಿದೆ.

1.5 ಲಕ್ಷ ಮೌಲ್ಯದ ವೈರಿಂಗ್ ಕೇಬಲ್ ಕಳ್ಳತನ
1.5 ಲಕ್ಷ ಮೌಲ್ಯದ ವೈರಿಂಗ್ ಕೇಬಲ್ ಕಳ್ಳತನ

By

Published : Aug 29, 2021, 5:36 PM IST

ದೊಡ್ಡಬಳ್ಳಾಪುರ: ನಿರ್ಮಾಣ ಹಂತದಲ್ಲಿದ್ದ ಮನೆಗೆ ರಾತ್ರಿ ನುಗ್ಗಿದ ಕಳ್ಳರು ಸ್ವಿಚ್ ಬೋರ್ಡ್​ನಿಂದ ವೈರಿಂಗ್ ಕೇಬಲ್ ಎಳೆದು 1.5 ಲಕ್ಷ ರೂ ಮೌಲ್ಯದ ವೈರಿಂಗ್ ಕೇಬಲ್ ಕಳ್ಳತನ ಮಾಡಿರುವ ಘಟನೆ ತಾಲೂಕಿನ ತಿರುಮಗೊಂಡನಹಳ್ಳಿ ಹೊರವಲಯದ ನಟರಾಜ್ ಎಂಬವರ ಮನೆಯಲ್ಲಿ ನಡೆದಿದೆ.

1.5 ಲಕ್ಷ ಮೌಲ್ಯದ ವೈರಿಂಗ್ ಕೇಬಲ್ ಕಳ್ಳತನ

ವಡ್ಡರಹಳ್ಳಿಯ ನಿವಾಸಿಯಾದ ನಟರಾಜ್ ತಿರುಮಗೊಂಡನಹಳ್ಳಿಯಲ್ಲಿ ಮನೆ ಕಟ್ಟಿಸುತ್ತಿದ್ದರು. ಈ ಮನೆ ನಿರ್ಮಾಣ ಹಂತದಲ್ಲಿದ್ದು ಕಟ್ಟಡಕ್ಕೆ ವೈರಿಂಗ್ ಮಾಡಲಾಗುತ್ತಿತ್ತು. ಸಂಬಂಧಿಕರ ಮದುವೆಗಾಗಿ ಮನೆ ಮಾಲೀಕ ನಟರಾಜ್ ಕುಟುಂಬ ಸಮೇತರಾಗಿ ಹೋಗಿದ್ದರು. ಮದುವೆ ಕಾರ್ಯಕ್ರಮದಿಂದ ಹಿಂದಿರುಗಿ ನಿರ್ಮಾಣ ಹಂತದಲ್ಲಿರುವ ಮನೆ ಬಳಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮನೆ ಮಾಲೀಕ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ : ₹21 ಕೋಟಿ ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಜಪ್ತಿ: ಎನ್​ಸಿಬಿ ಇತಿಹಾಸದಲ್ಲೇ ದೊಡ್ಡ ಕಾರ್ಯಾಚರಣೆ

ABOUT THE AUTHOR

...view details