ತಮಿಳುನಾಡು/ಸೂಳಗಿರಿ:ಇಲ್ಲಿನ ಸೂಳಗಿರಿ ಗ್ರಾಮದಲ್ಲಿ ಮತ್ತೊಮ್ಮೆ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿಸಿದೆ.
ಮತ್ತೆ ಗ್ರಾಮಗಳತ್ತ ಕಾಡಾನೆಗಳ ಹಿಂಡು... ಜನರಲ್ಲಿ ಹೆಚ್ಚಿದ ಆತಂಕ - ಸೂಳಗಿರಿ ಕಾಡಾನೆ ಪ್ರತ್ಯಕ್ಷ
ತಮಿಳುನಾಡಿನ ಸೂಳಗಿರಿ ಗ್ರಾಮದಲ್ಲಿ ಮತ್ತೊಮ್ಮೆ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿಸಿದೆ.
ಮತ್ತೆ ಗ್ರಾಮಗಳತ್ತ ಕಾಡಾನೆಗಳ ಹಿಂಡು
ಮತ್ತೆ ಗ್ರಾಮಗಳತ್ತ ಕಾಡಾನೆಗಳ ಹಿಂಡು... ಜನರಲ್ಲಿ ಹೆಚ್ಚಿದ ಆತಂಕ
ಮೊನ್ನೆಯಷ್ಟೇ ಕಾಣಿಸಿಕೊಂಡಿದ್ದ ಕಾಡಾನೆಗಳು ಮತ್ತೆ ಗ್ರಾಮಗಳತ್ತ ದಾಂಗುಡಿ ಇಟ್ಟಿರುವುದು ಜನರನ್ನು ಭಯಭೀತರನ್ನಾಗಿಸಿವೆ. ಸಂಜೆ ವೇಳೆ ಹೆಚ್ಚು ಗ್ರಾಮಗಳಿಂದ ದೂರ ತೆರಳುವ ಆನೆಗಳು ಹಗಲಿನ ವೇಳೆ ಕೆರೆಗಳತ್ತ ಬಂದು ಅಲ್ಲೇ ನೆಲೆಯೂರುತ್ತವೆ. ಹೀಗೆ ಆನೆಗಳ ಹಿಂಡು ಸೂಳಗಿರಿ, ಅಂಶಗಿರಿ ಗ್ರಾಮಗಳತ್ತ ಬಂದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಹಳ್ಳದ ಕಡೆಗೆ ಆನೆಗಳ ಹಿಂಡು ಸಾಗುತ್ತಿರುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.