ದೊಡ್ಡಬಳ್ಳಾಪುರ(ಬೆಂ.ಗ್ರಾ): ಸಂಜಯನಗರದ ಸ್ಮಶಾನದಲ್ಲಿ ಸೇರಿಕೊಂಡಿದ್ದ ಕಾಡುಹಂದಿಯೊಂದು ದಾರಿಹೋಕರ ಮೇಲೆ ದಾಳಿ ನಡೆಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಟಿ.ಆರ್.ಬಡಾವಣೆ ವ್ಯಾಪ್ತಿಯ ಸ್ಮಶಾನದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಾಡುಹಂದಿಯೊಂದು ಸೇರಿಕೊಂಡಿದ್ದು, ಸ್ಥಳೀಯರು ಸಾಮಾನ್ಯ ಹಂದಿ ಎಂದು ಕಡೆಗಣಿಸಿದ್ದರು. ಆದರೆ, ಇತ್ತೀಚೆಗೆ ದಾರಿಹೋಕರ ಮೇಲೆ ಈ ಹಂದಿ ದಾಳಿಗೆ ಮುಂದಾಗಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಇದು ಎರಡು ಕೋರೆ ಹಲ್ಲುಗಳು ಇರುವ ಕಾಡು ಹಂದಿ ಎಂದು ತಿಳಿದು ಬಂದಿದೆ.