ಹೊಸಕೋಟೆ(ಬೆಂಗಳೂರು):ಗಂಡನಅಕ್ರಮ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಗು ಜೊತೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದ ಶ್ವೇತ (24) ಮತ್ತು ಒಂದೂವರೆ ವರ್ಷದ ಯಕ್ಷಿತ್ ಮೃತ ದುರ್ದೈವಿಗಳು.
3 ವರ್ಷದ ಹಿಂದೆ ಗ್ರಾಮದ ರಾಕೇಶ್ ಎಂಬುವವನನ್ನು ಶ್ವೇತ ಮದುವೆಯಾಗಿದ್ದರು. ಮದುವೆ ನಂತರ ಗ್ರಾಮದ ಮಹಿಳೆ ಜೊತೆ ಗಂಡ ರಾಕೇಶ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಇದೇ ವಿಚಾರವಾಗಿ ಹಲವು ಬಾರಿ ಗಲಾಟೆ ಮಾಡಿ ಕುಟುಂಬಸ್ಥರು ಸೇರಿ ರಾಜಿ ಪಂಚಾಯತಿ ಮಾಡಿದ್ದರು. ಆದರೂ ಅಕ್ರಮ ಸಂಬಂಧದ ಸಹವಾಸ ರಾಕೇಶ್ ಬಿಟ್ಟಿರಲಿಲ್ಲ.