ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಮನೆಯಲ್ಲಿನ ರೂಮ್ನಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರದ ಕೆಂಪೇಗೌಡ ನಗರದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ತಮಿಳುನಾಡಿನ ಹೊಸೂರು ಮೂಲದ ನಂದಿನಿ (28) ನೇಣಿಗೆ ಶರಣಾಗಿದ್ದಾರೆ.
ಮೃತ ಮಹಿಳೆಗೆ 6 ವರ್ಷದ ಹಿಂದೆ ಮಾಣಿಕ್ಯ ವಾಸನ್ ಜೊತೆ ಮದುವೆಯಾಗಿತ್ತು. ಇವರ ದಾಂಪತ್ಯಕ್ಕೆ 5 ವರ್ಷದ ಹೆಣ್ಣು ಮಗು ಸಹ ಇದೆ. ಮಾಣಿಕ್ಯ ವಾಸನ್ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಾಂಬೆ ರೆಯಾನ್ ಉದ್ಯೋಗಿಯಾಗಿದ್ದರಿಂದ ನಗರದ ಕೆಂಪೇಗೌಡ ನಗರದಲ್ಲಿ ವಾಸವಾಗಿದ್ದರು.