ಮಂಡ್ಯ:ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಕೇಳಿ ಬರ್ತಿದೆ. ಪ್ರತಿ ಚುನಾವಣೆ ಬಂದಾಗ ಇದು ಹೆಚ್ಚು ಕಾಣುತ್ತೆ. ಬ್ರಾಹ್ಮಣರು ಯಾರೂ ಧ್ವನಿ ಎತ್ತಿ ಮಾತನಾಡುವವರು ಇಲ್ಲ, ಸಂಖ್ಯಾಬಲ ಇಲ್ಲ, ಅಲ್ಪ ಸಂಖ್ಯಾತರು ಇದ್ದಾರೆ. ಆದ್ದರಿಂದ ಏನು ಮಾತನಾಡಿದರೂ ನಡೆಯತ್ತೆ ಎಂಬ ಭಾವನೆ ಇದೆ. ಒಂದು ವೇಳೆ ಬ್ರಾಹ್ಮಣರು ಸಿಎಂ ಆಗುವುದಾದರೆ ಆಗಲಿ ಎಂದು ಪೇಜಾವರ ಶ್ರೀ ಅವರು ಹೇಳಿದ್ದಾರೆ.
ಮಂಡ್ಯದ ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಮಾತನಾಡಿದ ಅವರು, ಹೆಚ್ಡಿಕೆ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು. ಯಾಕೆ ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದಾ?. ರಾಜ್ಯದಲ್ಲಿ ಬ್ರಾಹ್ಮಣ MLA ಎಷ್ಟು ಜನ ಇದ್ದಾರೆ.? ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನೂ ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು. ಒಂದು ವೇಳೆ ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದು..? ಅವರು ಭಾರತದ ಪ್ರಜೆಗಳಲ್ಲವೆ..? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು.. ಬ್ರಾಹ್ಮಣರಿಂದಲೇ ಗಾಂಧಿ ಹತ್ಯೆ ಎಂಬ ವಿಚಾರವಾಗಿ ಮಾತನಾಡಿದಂತ ಅವರು, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದಾದರೆ ಇತರ ಸಮಾಜದಲ್ಲಿ ನಡೆದ ವಿಚಾರವನ್ನ ಸಾಮೂಹಿಕರಣ ಮಾಡ್ತಿಲ್ಲ? ಬ್ರಾಹ್ಮಣ ಸಮಾಜವನ್ನ ದೂರಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರುತ್ತಾರೆ.