ಆನೇಕಲ್:ಆರೋಗ್ಯಯುತ ಭಾರತ ಎಲ್ಲರ ಆದ್ಯ ಕರ್ತವ್ಯ. ಈವರೆಗಿನ ಲಾಕ್‌ಡೌನ್ ವ್ಯವಸ್ಥೆಗೆ ವಲಸೆ ಕಾರ್ಮಿಕರು ಅಕ್ಷರಶಃ ಕಂಗಾಲಾಗಿದ್ದಾರೆ. ಹಸಿವಿಗಾಗಿ ಅವರು ಸ್ವಾಭಿಮಾನ ಬಿಟ್ಟು ಕೇಳಲಾರರು. ಆದ್ದರಿಂದ ತಾಲೂಕು ಆಡಳಿತ ಪ್ರತಿ ಮನೆ, ಗುಡಿಸಲುಗಳ ಮಾಹಿತಿ ಪಡೆದು ಅವರಿಗೆ ಆರೋಗ್ಯ,ಊಟದ ಜೊತೆಗೆ ಧೈರ್ಯ ತುಂಬಬೇಕು ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಸಣ್ಣ ಅಸಹಕಾರ ಕಂಡು ಬಂದರೂ ನೇರವಾಗಿ ಸಿಬ್ಬಂದಿಯನ್ನು ಹೊಣೆ ಮಾಡಲಾಗುವುದು. ಯಾವುದೇ ತುರ್ತು ಸಂದರ್ಭದಲ್ಲಾಗಲೀ ಸಮಸ್ಯೆ ಬಂದಾಗ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್ ಅವರನ್ನು ಕೂಡಲೇ ಸಂಪರ್ಕಿಸಿ ತಿಳಿಸಿದರು.