ಕರ್ನಾಟಕ

karnataka

ETV Bharat / state

ದೇವೇಗೌಡ, ಸಿದ್ದರಾಮಯ್ಯ ವಿರುದ್ಧ ಪುಟ್ಟಸ್ವಾಮಿ ವಾಗ್ದಾಳಿ - hosakote by election- 2019

ಮೈತ್ರಿ ಸರ್ಕಾರ ಕೇವಲ ಅವಕಾಶವಾದಿ ಸರ್ಕಾರ ಆಗಿತ್ತು. ಸುಭದ್ರ ಸರ್ಕಾರಕ್ಕಾಗಿ ಮತದಾರರು ಬಿಜೆಪಿಗೆ ಮತ ಹಾಕಿ ಎಂದು ಹೊಸಕೋಟೆಯಲ್ಲಿ ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಬಿ.ಜೆ.ಪುಟ್ಟಸ್ವಾಮಿ ಹೊಸಕೋಟೆಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.

By

Published : Nov 23, 2019, 6:37 PM IST

ಹೊಸಕೋಟೆ:ಬಿಜೆಪಿಗೆ ಮತ ನೀಡಿದ್ರೆ ರಾಜ್ಯದಲ್ಲಿ ಸುಭದ್ರ ಸರ್ಕಾರ ಇರಲಿದೆ ಎಂದು ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಆಯ್ತು. ಆದ್ರೆ ಮೈತ್ರಿ ಪಾಲನೆ ಮಾಡದೇ ದೇವೇಗೌಡರು ಕುಟುಂಬ ಆಡಳಿತ ನಡೆಸಿತು ಎಂದರು.

ಬಿ.ಜೆ.ಪುಟ್ಟಸ್ವಾಮಿ ಹೊಸಕೋಟೆಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಆಗದೇ ಇದ್ದಾಗ ಮೈತ್ರಿಯಲ್ಲಿ ಮೊದಲ ಅಸಮಾಧಾನಿತ ವ್ಯಕ್ತಿಯಾಗಿ ಹೊರಹೊಮ್ಮಿದರು. ಇತ್ತ ಕುಮಾರಸ್ವಾಮಿ ಅಭಿವೃದ್ದಿಗೆ ಗಮನ ನೀಡದೇ ಕುಟುಂಬದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದರು ಎಂದು ಟೀಕಿಸಿದರು.

ಸಿದ್ದರಾಮಯ್ಯ ಅಹಿಂದ ಅಹಿಂದ ಅಂತಾರೆ, ಹಿಂದುಳಿದ ವರ್ಗಗಳಿಗೆ ಅವರು ಏನು ಮಾಡಿದ್ದಾರೆ. ಅಕ್ಕಿ ಕೊಟ್ಟ ಮಾತ್ರಕ್ಕೆ ಅಹಿಂದ ಆಗಲ್ಲ. ಅಕ್ಕಿ ಕೊಡಲು ಕೇಂದ್ರ ಸರ್ಕಾರದ ನೆರವು ಇದೆ. ಆದ್ರೆ ಹಸು ನಮ್ಮದು ಹಗ್ಗ ಅವರದು ಎಂಬಾತಾಗಿದೆ ಎಂದರು.

ಪ್ರತಿಕಾಗೋಷ್ಠಿಯಲ್ಲಿ ಡಿಸಿಎಂ ಕಾರಜೋಳ, ಸಂಸದ ಮುನಿಸ್ವಾಮಿ, ತಾರಾ ಅನುರಾಧ ಇದ್ದರು.

ABOUT THE AUTHOR

...view details