ನೆಲಮಂಗಲ: ತಾಲೂಕಿನ ಅವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ ಕಾರ್ಖಾನೆಯವರು ಅಕ್ರಮವಾಗಿ ಬೋರ್ವೆಲ್ ಕೊರೆಸಲು ಮುಂದಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಖಾನೆಯ ಅಕ್ರಮ ಬೋರ್ವೆಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ - ನೆಲಮಂಗಲ ತಾಲೂಕಿನ ಅವೇರಹಳ್ಳಿ
ನೆಲಮಂಗಲ ತಾಲೂಕಿನ ಅವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಯವರು ಅಕ್ರಮ ಬೋರ್ವೆಲ್ ಕೊರೆಸಲು ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕೈಗಾರಿಕಾ ಪ್ರದೇಶ ಇದಾಗಿದ್ದು, ಅಲ್ಲಿನ ಅನುಮತಿ ಪಡೆಯಬೇಕು ಎಂಬುದು ಗ್ರಾಮಸ್ಥರ ದೂರು.
![ಕಾರ್ಖಾನೆಯ ಅಕ್ರಮ ಬೋರ್ವೆಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ](https://etvbharatimages.akamaized.net/etvbharat/prod-images/768-512-3964750-thumbnail-3x2-nlmg.jpg)
ಕಾರ್ಖಾನೆಯ ಅಕ್ರಮ ಬೋರ್ವೆಲ್ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು
ಕಾರ್ಖಾನೆಯ ಅಕ್ರಮ ಬೋರ್ವೆಲ್ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು
ದಾಬಸ್ ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನದಿ ನೀರು ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಇದೇ ಕಾರಣಕ್ಕೆ ಅವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಫಾಪನೆಗೆ ಮಾಲೀಕರು ಮುಂದಾಗಿದ್ದಾರೆ. ಆದರೆ, ಕಾರ್ಖಾನೆ ಮಾಲೀಕರು ಹೇಮಾವತಿ ನದಿ ನೀರನ್ನು ಕಾಯುವ ಬದಲಿಗೆ, ತಾವೇ ಕಾರ್ಖಾನೆಯ ಅವರಣದಲ್ಲಿ ಬೋರ್ವೆಲ್ ಕೊರೆಸುವುದಕ್ಕೆ ಮುಂದಾಗಿದ್ದರು.
ಬೆಂಗಳೂರಿನ ರಾಜಾಜಿನಗರ ಮೂಲದ ಎಸ್‍ಎಂಸಿ ಎಂಟರ್ ಪ್ರೈಸಸ್ ಅಂಡ್ ಬಿಲ್ಡರ್ಸ್ ಮಾಲೀಕ ಗೋಪಿನಾಥ್ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.