ಕರ್ನಾಟಕ

karnataka

ETV Bharat / state

ಅಧಿಕಾರಿಗಳ ಸಮನ್ವಯ ಕೊರತೆಗೆ ದೊಡ್ಡಬಳ್ಳಾಪುರ ಆಯ್ತು ಧೂಳ್​​ಪುರ

ದೊಡ್ಡಬಳ್ಳಾಪುರ ನಗರಸಭೆ ಮನಬಂದಂತೆ ಮ್ಯಾನ್​ಹೋಲ್ ನಿರ್ಮಿಸುತ್ತಿದೆ. ಲೋಕೋಪಯೋಗಿ ಇಲಾಖೆ ತನಗಿಷ್ಟಬಂದಂತೆ ರಸ್ತೆ ಕಾಮಗಾರಿ ನಡೆಸುತ್ತಿರುವ ಪರಿಣಾಮ ಪಟ್ಟಣ ಸಂಪೂರ್ಣ ಧೂಳಿನಿಂದ ಆವರಿಸಿದೆ.

ಧೂಳುಮಯವಾದ ದೊಡ್ಡಬಳ್ಳಾಪುರ

By

Published : Nov 5, 2019, 10:19 PM IST

ದೊಡ್ಡಬಳ್ಳಾಪುರ:ನಗರಸಭೆ ಮನಬಂದಂತೆ ಮ್ಯಾನ್​ಹೋಲ್ ನಿರ್ಮಿಸುತ್ತಿದೆ. ಲೋಕೋಪಯೋಗಿ ಇಲಾಖೆ ತನಗಿಷ್ಟಬಂದಂತೆ ರಸ್ತೆ ಕಾಮಗಾರಿ ನಡೆಸುತ್ತಿದೆ. ಈ ಎರಡು ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಅಮಾಯಕ ಜನರು ನರಕ ಅನುಭವಿಸುತ್ತಿದ್ದು, ದೊಡ್ಡಬಳ್ಳಾಪುರ ಧೂಳ್​ಪುರವಾಗಿ ಪರಿವರ್ತನೆಯಾಗುತ್ತಿದೆ.

ಪಟ್ಟಣದ ಕೊಂಗಾಡಿಯಪ್ಪ ಕಾಲೇಜ್, ಇಸ್ಲಾಂಪುರ, ತಾಲೂಕು ಕಚೇರಿ ರಸ್ತೆ ಮತ್ತು ಹಾಲಿನ ಡೈರಿ ವೃತ್ತದವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಶುರುವಾಗಿ 4ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಿವಿಧ ಕಾಮಗಾರಿಗಳಿಂದಾಗಿ ತೊಂದರೆ ಅನುಭವಿಸುತ್ತಿರುವ ಜನ

ಬೆಸ್ಕಾಂ, ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ದಸರಾಗೆ ಮುಗಿಯಬೇಕಿದ್ದ ಕಾಮಗಾರಿ ಇನ್ನೂ ಕುಂಟುತ್ತಲೆ ಸಾಗಿದೆ. ಸಾರ್ವಜನಿಕರ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡುವುದರ ಜೊತೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ಅಧಿಕಾರಿಗಳನ್ನ ಸ್ಥಳಕ್ಕೆ ಕರೆಸಿ ಶೀಘ್ರವೇ ಕಾಮಾಗಾರಿ ಮುಗಿಸುವಂತೆ ಗಡುವು ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ.
ಕುಟುಂತಾ ಸಾಗುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ವಾಸವಾಗಿರುವ ಜನರು ಧೂಳಿನ ಕಾಟಕ್ಕೆ ರೋಸಿಹೋಗಿದ್ದಾರೆ. ಹಲವು ರೋಗಗಳಿಗೆ ತುತ್ತಾಗುವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ಮ್ಯಾನ್​​ಹೋಲ್​ಗಳಿಗೆ ಈಗಾಗಲೇ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details