ಬೆಂಗಳೂರು :ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ನಂದಿಬೆಟ್ಟಕ್ಕೆ ಸಾಗರದಂತೆ ಪ್ರೇಮಿಗಳು ಭೇಟಿ ನೀಡಿದ್ದಾರೆ. ವಾರಾಂತ್ಯದಲ್ಲಿ ನಂದಿಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತೆ. ಈ ಬಾರಿ ಪ್ರೇಮಿಗಳ ದಿನ ಭಾನುವಾರ ಬಂದಿರುವುದು ನಂದಿಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರಲು ಕಾರಣವಾಗಿದೆ.
ನಂದಿಬೆಟ್ಟಕ್ಕೆ ಮೇಲೆ ಹಾರಿ ಬಂದ ಲವ್ ಬರ್ಡ್ಸ್.. ಪ್ರೇಮಿಗಳ ದಿನ ಪ್ರೀತ್ಸೋ ನಿರ್ಮಲ ಮನಸುಗಳ ಪ್ರೀತಿಯ ಪ್ರವಾಹ.. - ನಂದಿಬೆಟ್ಟದ ಸೂರ್ಯೋದಯ ನೋಡಲು
ಮುಂಜಾನೆಯಿಂದ ನಂದಿಬೆಟ್ಟಕ್ಕೆ ಪ್ರೇಮಿಗಳು ಭೇಟಿ ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳು ಬರುತ್ತಿರುವ ಹಿನ್ನೆಲೆ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ..
ಬೆಂಗಳೂರು ನಗರದಿಂದ 50 ಕಿ.ಮೀ ಅಂತರದಲ್ಲಿರುವ ನಂದಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಪ್ರೇಮಿಗಳು ಭೇಟಿ ನೀಡಿದ್ದಾರೆ. ಮುಂಜಾನೆಯಿಂದ ನಂದಿಬೆಟ್ಟಕ್ಕೆ ಪ್ರೇಮಿಗಳು ಭೇಟಿ ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳು ಬರುತ್ತಿರುವ ಹಿನ್ನೆಲೆ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಮುಂಜಾನೆ ನಂದಿಬೆಟ್ಟದ ಸೂರ್ಯೋದಯ ನೋಡಲು ಪ್ರೇಮಿಗಳು ಮುಗಿಬಿದ್ದರು, ಮುಂಜಾನೆಯ ಚಳಿಯಲ್ಲಿ ಪರಸ್ಪರ ಕೈಹಿಡಿದು ಕೊಂಡು ನಂದಿಬೆಟ್ಟ ಸುತ್ತಾಡಿ ನಂದಿಗಿರಿ ಧಾಮ ಸೌಂದರ್ಯ ಸವಿದರು. ನಂದಿಬೆಟ್ಟದ ಸುತ್ತಮುತ್ತಲಿನ ರೆಸ್ಟೋರೆಂಟ್ ಮತ್ತು ರೆಸಾರ್ಟ್‌ಗಳಲ್ಲೂ ಜೋಡಿಗಳ ದೃಶ್ಯ ಸಾಮಾನ್ಯವಾಗಿತ್ತು.