ಕರ್ನಾಟಕ

karnataka

ETV Bharat / state

ಫ್ಲವರ್ ಡೆಕೋರೇಷನ್​ನಲ್ಲಿ ಪ್ಲಾಸ್ಟಿಕ್ ಹೂಗಳ ಬಳಕೆ: ವ್ಯಾಪಾರಿಗಳು, ಬೆಳೆಗಾರರು ಕಂಗಾಲು - ಫ್ಲವರ್ ಡೆಕೋರೇಷನ್​​ನಲ್ಲಿ ಪ್ಲಾಸ್ಟಿಕ್ ಹೂ

ಪ್ಲಾಸ್ಟಿಕ್ ಹೂಗಳ ಬಳಕೆ ಬಗ್ಗೆ ಮಾತನಾಡಿದ ಫ್ಲವರ್ ಡೆಕೋರೇಷನ್ ಮಾಡುವ ಗುಂಡಣ್ಣ, ಹೊರಗಡೆ ಹಾಕುವ ನೇಮ್ ಪ್ಲೇಟ್‌ಗಳಲ್ಲಿ ನಾವು ಪ್ಲಾಸ್ಟಿಕ್ ಹೂಗಳ ಬಳಕೆ ಮಾಡುತ್ತೇವೆ. ಬಿಸಿಲಿಗೆ ನೈಜ  ಹೂವು ಬೇಗನೆ ಬಾಡುವುದರಿಂದ ಪ್ಲಾಸ್ಟಿಕ್ ಹೂಗಳ ಬಳಕೆ ಮಾಡಲಾಗುತ್ತಿದೆ ಎಂದರು.

decoration-growers-problems-news
ಫ್ಲವರ್ ಡೆಕೋರೇಷನ್​ನಲ್ಲಿ ಪ್ಲಾಸ್ಟಿಕ್ ಹೂಗಳ ಬಳಕೆ

By

Published : Mar 16, 2021, 10:40 PM IST

ದೊಡ್ಡಬಳ್ಳಾಪುರ:ಫ್ಲವರ್ ಡೆಕೋರೇಷನ್​​ನಲ್ಲಿ ಪ್ಲಾಸ್ಟಿಕ್ ಹೂಗಳ ಬಳಕೆಯಿಂದಾಗಿ ಹೂ ಬೆಳೆಗಾರರು ಕಂಗಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇರುವಾಗ ಫ್ಲವರ್ ಡೆಕೋರೇಷನ್ ಮಾಡುವವರು ಪ್ಲಾಸ್ಟಿಕ್ ಹೂಗಳನ್ನು ಬಳಕೆ ಮಾಡುತ್ತಿದ್ದು, ಹೂಗಳ ಬೇಡಿಕೆ ಕುಸಿಯಲು ಕಾರಣವಾಗಿದೆ.

ಫ್ಲವರ್ ಡೆಕೋರೇಷನ್​ನಲ್ಲಿ ಪ್ಲಾಸ್ಟಿಕ್ ಹೂಗಳ ಬಳಕೆ

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ತಂದೆಯಿಂದ ಕಿಡ್ನಾಪ್ ಕೇಸ್ ದಾಖಲು

ಹೂವಿನ ಅಲಂಕಾರ ಇಲ್ಲದೆ ಯಾವುದೇ ಕಾರ್ಯಕ್ರಮವೂ ನಡೆಯುವುದಿಲ್ಲ. ಹೂವಿನ ಸೌಂದರ್ಯ ಸಹಜವಾಗಿಯೇ ನೋಡುಗರ ಮನಸ್ಸು ಅರಳಿಸುತ್ತೆ. ಕಾರ್ಯಕ್ರಮದ ಅದ್ಧೂರಿತನಕ್ಕಾಗಿ ಫ್ಲವರ್ ಡೆಕೋರೇಷನ್ ಮಾಡಲಾಗುತ್ತೆ. ಮಾರುಕಟ್ಟೆಯಲ್ಲಿ ಅಲಂಕಾರಿಕ ಹೂಗಳ ಬೇಡಿಕೆ ಇರುವುದರಿಂದ ಹೆಚ್ಚು ರೈತರು ಹೂವಿನ ಬೇಸಾಯ ಮಾಡುತ್ತಿದ್ದಾರೆ.

ಹಬ್ಬ-ಹರಿದಿನಗಳು ಮತ್ತು ಮದುವೆ ಸಮಾರಂಭಗಳಲ್ಲಿ ಹೂವಿಗೆ ಸಾಕಷ್ಟು ಬೇಡಿಕೆ ಇದ್ದು, ಅಲಂಕಾರಕ್ಕಾಗಿ ಬಳಸುವ ಜರ್ಬೆರಾ, ಗ್ಲಾಡಿಯಸ್ ಮತ್ತು ಗುಲಾಬಿ ಹೂವಿಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಇರುತ್ತೆ. ಈ ಸಮಯದಲ್ಲಿ ಫ್ಲವರ್ ಡೆಕೋರೇಷನ್ ಮಾಡುವವರು ಹೂವುಗಳ ಬದಲಿಗೆ ಪ್ಲಾಸ್ಟಿಕ್ ಹೂಗಳ ಬಳಕೆ ಮಾಡುತ್ತಾರೆ. ನೈಜ ಹೂಗಳ ನಡುವೆ ಪ್ಲಾಸ್ಟಿಕ್ ಹೂಗಳ ಬಳಕೆ ಮಾಡುತ್ತಾರೆ. ನೋಡುವ ಜನರಿಗೂ ನೈಜ ಹೂವು ಮತ್ತು ಪ್ಲಾಸ್ಟಿಕ್ ಹೂವಿನ ವ್ಯತ್ಯಾಸವೇ ತಿಳಿಯುವುದಿಲ್ಲ.

ಹೂವಿಗೆ ಬೇಡಿಕೆ ಇರುವ ಸಮಯದಲ್ಲಿ ಫ್ಲವರ್ ಡೆಕೋರೇಷನ್ ಮಾಡುವರು ಪ್ಲಾಸ್ಟಿಕ್ ಹೂಗಳ ಬಳಕೆ ಮಾಡುವುದರಿಂದ ಹೂವಿನ ಬೇಡಿಕೆ ಕುಸಿಯುತ್ತೆ. ಒಂದು ಜರ್ಬೆರಾ ಹೂ ಬೆಳೆಯಲು 2 ರೂಪಾಯಿ ವೆಚ್ಚವಾಗುತ್ತೆ. ಪ್ಲಾಸ್ಟಿಕ್ ಬಳಕೆಯಿಂದ ಒಂದು ಜರ್ಬೆರಾ 50 ಪೈಸೆ ಕೇಳುತ್ತಾರೆ. ಇದರಿಂದ ಹೂ ಬೆಳೆಯುವ ರೈತರು ಕಷ್ಟದಲ್ಲಿದ್ದಾರೆಂದು ತಮ್ಮ ಅಳಲು ತೊಡಿಕೊಂಡರು.

ಪ್ಲಾಸ್ಟಿಕ್ ಹೂಗಳ ಬಳಕೆ ಬಗ್ಗೆ ಮಾತನಾಡಿದ ಫ್ಲವರ್ ಡೆಕೋರೇಷನ್ ಮಾಡುವ ಗುಂಡಣ್ಣ, ನಾವು ಪ್ಲಾಸ್ಟಿಕ್ ಹೂಗಳ ಬಳಕೆ ಮಾಡುವುದು ಹೊರಗಡೆ ಹಾಕುವ ನೇಮ್ ಪ್ಲೇಟ್‌ಗಳಲ್ಲಿ. ಬಿಸಿಲಿಗೆ ನೈಜ ಹೂವು ಬೇಗನೆ ಬಾಡುವುದರಿಂದ ಪ್ಲಾಸ್ಟಿಕ್ ಹೂಗಳ ಬಳಕೆ ಮಾಡಲಾಗುವುದು. ಒಳಾಂಗಣದ ಅಲಂಕಾರಕ್ಕೆ ನೈಜ ಹೂಗಳನ್ನೇ ಬಳಕೆ ಮಾಡಲಾಗುವುದು. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ದುಬಾರಿ ಆದಾಗ ಪ್ಲಾಸ್ಟಿಕ್ ಹೂಗಳ ಬಳಕೆ ಅನಿವಾರ್ಯವಾಗಿರುತ್ತೆ ಎನ್ನುತ್ತಾರೆ.

ABOUT THE AUTHOR

...view details