ಆನೇಕಲ್:ಸಂಗೀತದ ಮೂಲಕ ಭಗವಂತ(ಅಲ್ಲಾಹು)ನನ್ನು ಹಾಡಿ ಹೊಗಳುವ ಪದ್ಧತಿಗೆ ಇಸ್ಲಾಂನಲ್ಲಿ ಕವ್ವಾಲಿ ಎನ್ನಲಾಗುತ್ತದೆ. ಹಾಗಾಗಿ ಇಸ್ಲಾಂ ಧರ್ಮದ ಹಬ್ಬ ಹರಿದಿನ,ದರ್ಗಾ ವಾರ್ಷಿಕೋತ್ಸವಗಳಲ್ಲಿ ಸೂಫಿ ಸಂತರ ಸುಶ್ರಾವ್ಯ ಹಾಡುಗಾರಿಕೆ ಕೇಳಲು ಜನರ ದಂಡೇ ನೆರೆದಿರುತ್ತದೆ. ಆನೇಕಲ್‌ನ ಹಝರತ್ ಬಾಬು ಷಾ ವಾಲಿ ದರ್ಗಾದಲ್ಲೂ ಕವ್ವಾಲಿ ಸಂಗೀತ ಏರ್ಪಡಿಸಲಾಗಿತ್ತು.
ಇಸ್ಲಾಂ ಸಂಸ್ಕೃತಿಯ ವಿಶಿಷ್ಟ ಕಲೆ: ಉರುಸ್ ವೇಳೆ ಕವ್ವಾಲಿ ಸಂಭ್ರಮ - undefined
ಆನೇಕಲ್ ದೊಮ್ಮಸಂದ್ರದ ವಿವಾದಿತ ಹಝರತ್ ಬಾಬು ಷಾ ವಾಲಿ ದರ್ಗಾದಲ್ಲಿ ಸತತ ಮೂರ್ನಾಲ್ಕು ವರ್ಷದಿಂದ ಸಂದುಲ್ ಮತ್ತು ಉರುಸ್ ಆಚರಣೆ ನಡೆಸಲಾಗುತ್ತಿದ್ದು,ಈ ಬಾರಿ ಮೊದಲ ದಿನದಂದು ಮೆರವಣಿಗೆ, ಜುಲುಸ್ ಆಚರಿಸಿ ಎರಡನೇ ದಿನ ಕವ್ವಾಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೊಮ್ಮಸಂದ್ರದ ವಿವಾದಿತ ಹಝರತ್ ಬಾಬು ಷಾ ವಾಲಿ ದರ್ಗಾದಲ್ಲಿ ಸತತ ಮೂರ್ನಾಲ್ಕು ವರ್ಷದಿಂದ ಸಂದುಲ್(ಗಂಧ)ದ ಮತ್ತು ಉರುಸ್ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮೊದಲ ದಿನದಂದು ಮೆರವಣಿಗೆ, ಜುಲುಸ್ ಆಚರಿಸಿ, ಎರಡನೇ ದಿನ ಕವ್ವಾಲಿ ಏರ್ಪಡಿಸಲಾಗಿದೆ. ಉತ್ತರಪ್ರದೇಶದ ಕವ್ವಾಲಿ ವಿದ್ವಾನ್ ಉಮರ್ ದರಝ್ ಚಿಸ್ಟಿ ತಂಡ ಮತ್ತು ಮುಂಬೈನ ನಶ್ರತ್ ಕೌಸರ್ ಮಹಿಳಾ ಹಾಡುಗಾರ್ತಿಯನ್ನು ಕರೆಸಿ ಪರಸ್ಪರ ಕವ್ವಾಲಿ ಜುಗಲ್‌ಬಂಧಿ ಏರ್ಪಡಿಸಿ ಸಾವಿರಾರು ಸಂಗೀತದ ರಸದೌತಣ ಉಣಬಡಿಸಿದರು.
ಕವ್ವಾಲಿ ಹಾಡುತ್ತಿದ್ದಂತೆ ಥ್ರಿಲ್ ಆದ ಪ್ರೇಕ್ಷಕರು ಹಣದ ಮಳೆಗೆರೆಯುತ್ತಿದ್ದರು. ಮುಸಲ್ಮಾನ್ ಆಧ್ಯಾತ್ಮಿಕತೆಯಲ್ಲಿ ಮಹತ್ವ ಪಡೆದಿರುವ ಈ ಸಂಗೀತ ಕಲೆ ಇಂದಿಗೂ ದೇಶದ ಗ್ರಾಮೀಣ ಮಟ್ಟದಲ್ಲಿ ಜನಜನಿತವಾಗಿದೆ. ಗಾನ ಮಾಧುರ್ಯದಿಂದ ಅಲ್ಲಾನ ಶಕ್ತಿಯನ್ನು ಗುಣಗಾನ ಮಾಡುತ್ತಾ ಹಾಡುವ ಕವ್ವಾಲಿ ಸಂಗೀತ ಪ್ರಕಾರಕ್ಕೆ ಶತಮಾನಗಳ ಇತಿಹಾಸವಿದೆ.