ದೊಡ್ಡಬಳ್ಳಾಪುರ:ಮದ್ಯ ಕೇಳುವ ನೆಪದಲ್ಲಿ ಬಾರ್‌ಗೆ ಬಂದ ದುಷ್ಕರ್ಮಿಗಳ ತಂಡ ಕ್ಯಾಶಿಯರ್ಗೆ ಪೆಪ್ಪರ್ ಸ್ಪ್ರೇ ಹೊಡೆದು ಒಂದು ಲಕ್ಷ ರೂ.ಗೂ ಅಧಿಕ ಹಣ ದೋಚಿ ಎಸ್ಕೇಪ್ ಆದ ಘಟನೆ ನಗರದಲ್ಲಿ ನಡೆದಿದೆ.
ಪ್ರಕರಣ ಹೀಗೆ ನಡೆಯಿತು...
ದೊಡ್ಡಬಳ್ಳಾಪುರ:ಮದ್ಯ ಕೇಳುವ ನೆಪದಲ್ಲಿ ಬಾರ್‌ಗೆ ಬಂದ ದುಷ್ಕರ್ಮಿಗಳ ತಂಡ ಕ್ಯಾಶಿಯರ್ಗೆ ಪೆಪ್ಪರ್ ಸ್ಪ್ರೇ ಹೊಡೆದು ಒಂದು ಲಕ್ಷ ರೂ.ಗೂ ಅಧಿಕ ಹಣ ದೋಚಿ ಎಸ್ಕೇಪ್ ಆದ ಘಟನೆ ನಗರದಲ್ಲಿ ನಡೆದಿದೆ.
ಪ್ರಕರಣ ಹೀಗೆ ನಡೆಯಿತು...
ಕಳೆದ ರಾತ್ರಿ ನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಮಧುಶ್ರೀ ಹೆಸರಿನ ಬಾರ್‌ನ ಬಾಗಿಲು ಮುಚ್ಚುವ ವೇಳೆ ಎರಡು ಬೈಕ್ನಲ್ಲಿ ನಾಲ್ಕು ಜನ ದುಷ್ಕರ್ಮಿಗಳು ಬಂದಿದ್ದಾರೆ. ಅಲ್ಲಿದ್ದ ಕ್ಯಾಶಿಯರ್ ರಂಗಯ್ಯನ ಬಳಿ ಮದ್ಯ ನೀಡುವಂತೆ ಕೇಳಿದ್ದಾರೆ. ಅಂಗಡಿ ಬಾಗಿಲು ಮುಚ್ಚಲು ಸಮಯವಾಗಿದ್ದರಿಂದ ಆತ ಮದ್ಯ ನೀಡಲು ನಿರಾಕರಿಸಿದ್ದಾನೆ. ತಕ್ಷಣವೇ ದುಷ್ಕರ್ಮಿಗಳು ಕ್ಯಾಶಿಯರ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಆತನ ಕೈಯಲ್ಲಿದ್ದ 1 ಲಕ್ಷಕ್ಕೂ ಅಧಿಕ ನಗದು, ಎಟಿಎಂ ಕಾರ್ಡ್,ಆಧಾರ್ ಕಾರ್ಡ್ ಹಾಗು ಮೊಬೈಲ್ ಕಸಿದುಕೊಂಡಿದ್ದಾರೆ.
ಓದಿ: ಬೆಂಗಳೂರಿಗೆ ರಾಜ್ಯ ಉಸ್ತುವಾರಿ ಅರುಣ್.. ಸಂಪುಟ ಸರ್ಜರಿ, ಗ್ರಾಪಂ ಚುನಾವಣೆ ಬಗ್ಗೆ ಚರ್ಚೆ
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್, ಸಬ್ಇನ್ಸ್ಪೆಕ್ಟರ್ಗಳಾದ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.