ದೊಡ್ಡಬಳ್ಳಾಪುರ : ಕೃಷಿ ಚಟುವಟಿಕೆ ಸೇರಿದಂತೆ ವ್ಯಾಪಾರಕ್ಕಾಗಿ ಬ್ಯಾಂಕ್ನಲ್ಲಿ ಸಾಲ ಮಾಡಿದ ರೈತರಿಗೆ ಯೂನಿಯನ್ ಬ್ಯಾಂಕ್ ಒನ್ ಟೈಮ್ ಸೆಟ್ಲ್ಮೆಂಟ್ ಯೋಜನೆಯನ್ನು ಜಾರಿ ಮಾಡಿದೆ.
ಸಾಲದಿಂದ ಮುಕ್ತರಾಗಲು ರೈತರಿಗೆ ಯೂನಿಯನ್ ಬ್ಯಾಂಕ್ ಹೊಸ ಯೋಜನೆ - Doddaballapura offer farmers to clear the debit
ಕೃಷಿ ಚಟುವಟಿಕೆ ಸೇರಿದಂತೆ ವ್ಯಾಪಾರಕ್ಕಾಗಿ ಬ್ಯಾಂಕ್ನಲ್ಲಿ ಸಾಲ ಮಾಡಿದ ರೈತರಿಗೆ ಯೂನಿಯನ್ ಬ್ಯಾಂಕ್ ಒನ್ ಟೈಮ್ ಸೆಟ್ಲ್ಮೆಂಟ್ ಯೋಜನೆಯನ್ನು ಜಾರಿ ಮಾಡಿದೆ. ಸಾಲ ಬಾಕಿ ಉಳಿಸಿಕೊಂಡಿರುವ ಖಾತೆದಾರರು ಬ್ಯಾಂಕ್ಗೆ ಭೇಟಿ ಕೊಟ್ಟು ಸಾಲ ಚುಕ್ತ ಪ್ರಮಾಣ ಪತ್ರ ಪಡೆಯುವಂತೆ ತಿಳಿಸಿದೆ.
ಬ್ಯಾಂಕ್ ಸಾಲದಿಂದ ಮುಕ್ತರಾಗಲು ರೈತರಿಗೆ ಯೋಜನೆ ರೂಪಿಸಿದ ಯೂನಿಯನ್ ಬ್ಯಾಂಕ್
ಯಾವ ಖಾತೆದಾರರು ಸಾಲದ ಕಂತುಗಳನ್ನು ಬಾಕಿ ಉಳಿಸಿಕೊಂಡಿರುತ್ತಾರೆ ಅವರು ತಮ್ಮ ಸಾಲದ ಶೇಕಡಾ 25 ರಷ್ಟು ಪಾವತಿ ಮಾಡಿದರೆ, ಇನ್ನುಳಿದ ಶೇ 75 ರಷ್ಟು ಸಾಲವನ್ನು ಚುಕ್ತ ಮಾಡಲಾಗುವುದು. ಅವರಿಗೆ ಬ್ಯಾಂಕ್ನಿಂದ ಬಾಕಿ ಚುಕ್ತಾ ಪ್ರಮಾಣ ಪತ್ರ ನೀಡಲಾಗುವುದು. ಜೊತೆ ರೈತರಿಗೆ ಹೊಸ ಕೃಷಿ ಸಾಲ ನೀಡಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾಲ ಬಾಕಿ ಉಳಿಸಿಕೊಂಡಿರುವ ಖಾತೆದಾರರು ಬ್ಯಾಂಕ್ಗೆ ಭೇಟಿ ಕೊಟ್ಟು ಸಾಲ ಚುಕ್ತ ಪ್ರಮಾಣ ಪತ್ರ ಪಡೆಯುವಂತೆ ಮನವಿ ಮಾಡಿದ್ದಾರೆ.
Last Updated : Oct 21, 2020, 12:00 PM IST