ಕರ್ನಾಟಕ

karnataka

ETV Bharat / state

ಮೂರು ವರ್ಷದ ಬಾಲಕಿ ಮೇಲೆ ದೊಡ್ಡಪ್ಪನಿಂದ ಅತ್ಯಾಚಾರ: ಪೈಶಾಚಿಕ ಕೃತ್ಯಕ್ಕೆ ಮಗು ಬಲಿ - ಮಗಳ ಮೇಲೆ ದೊಡ್ಡಪ್ಪನಿಂದ ಅತ್ಯಾಚಾರ

ಸಂಬಂಧದಲ್ಲಿ ಮಗಳಾಗುವ ಬಾಲಕಿ ಮೇಲೆ ಅತ್ಯಾಚಾರ ಮಾಡಿ‌ದ್ದ ಆರೋಪಿಯು ನಂತರ ಫುಡ್ ಪಾಯಿಸನ್ ಆಗಿದೆ ಮತ್ತು ಅಪಘಾತವಾಗಿದೆ ಎಂಬಂತೆ ಬಿಂಬಿಸುವ ನಾಟಕ‌ ಮಾಡಿದ್ದ. ಸತ್ತ ಮಗುವಿಗೆ ವಾಹನದಿಂದ ಡಿಕ್ಕಿ ಹೊಡೆಸಿದ್ದ ಎನ್ನಲಾಗಿದೆ.

ದೊಡ್ಡಪ್ಪನಿಂದ ಅತ್ಯಾಚಾರ
uncle reped on girl

By

Published : Mar 24, 2022, 6:57 PM IST

ಆನೇಕಲ್:ಮೂರು ವರ್ಷದ ಬಾಲಕಿ ಮೇಲೆ ಆಕೆಯ ದೊಡ್ಡಪ್ಪನೇ ಅತ್ಯಾಚಾರ ಎಸಗಿ, ಪೈಶಾಚಿಕವಾಗಿ ವರ್ತಿಸಿರುವುದರಿಂದ ತೀವ್ರ ರಕ್ತಸ್ರಾವವಾಗಿ ಬಾಲಕಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಅತ್ತಿಬೆಲೆಯ ನೆರಳೂರಿನಲ್ಲಿ ಈ ಬರ್ಬರ ಕೃತ್ಯ ನಡೆದಿದೆ. ಕಾಮುಖ ದೀಪು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧದಲ್ಲಿ ಮಗಳಾಗುವ ಬಾಲಕಿ ಮೇಲೆ ಅತ್ಯಾಚಾರ ಮಾಡಿ‌ದ್ದ ಆರೋಪಿಯು ನಂತರ ಫುಡ್ ಪಾಯಿಸನ್ ಆಗಿದೆ ಮತ್ತು ಅಪಘಾತವಾಗಿದೆ ಎಂಬಂತೆ ಬಿಂಬಿಸುವ ನಾಟಕ‌ವಾಡಿದ್ದಾನೆ. ಇಷ್ಟೂ ಸಾಲದೆಂಬಂತೆ, ಸತ್ತ ಮಗುವಿಗೆ ವಾಹನದಿಂದ ಡಿಕ್ಕಿ ಹೊಡೆಸಿದ್ದ ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ. ಹೀಗಾಗಿ ಆರೋಪಿ ದೊಡ್ಡಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details