ದೊಡ್ಡಬಳ್ಳಾಪುರ:ಅನಧಿಕೃತ ಬಡಾವಣೆಗಳ ವಿರುದ್ಧ ಸಮರ ಸಾರಿರುವ ತಹಶೀಲ್ದಾರ್ ಶಿವರಾಜ್ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.
ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆ ನಿರ್ಮಾಣವಾಗಿದ್ದ 17 ಎಕರೆ 11 ಗುಂಟೆ ಜಾಗ ತೆರವುಗೊಳಿಸಲಾಗಿದೆ. ಸದನ ಸಮಿತಿಯ ನಿರ್ದೇಶನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಆದೇಶದಂತೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಶಿವರಾಜ್ ನೇತೃತ್ವದಲ್ಲಿ ಅನಧಿಕೃತ ಬಡಾವಣೆಗಳ ತೆರವು ಕಾರ್ಯ ನಡೆದಿದೆ.
ಭೂ ಪರಿವರ್ತನೆ ಆಗದೇ ಇರುವ ಮತ್ತು ಯೋಜನಾ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ನಿರ್ಮಾಣವಾಗದೆ ಇರುವ ಅನಧಿಕೃತ ಬಡಾವಣೆಗಳ ವಿರುದ್ಧ ಮೊದಲ ಹಂತದಲ್ಲಿ ತೆರವು ಕಾರ್ಯಚರಣೆ ಮಾಡಲಾಯಿತು.
ತಾಲೂಕಿನ ಮಧುರೆ ಹೋಬಳಿಯ ಹೊನ್ನವಾರದ ಸರ್ವೆ ನಂಬರ್ 73ರಲ್ಲಿ 3 ಎಕರೆ, ನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 54/9ರ 9 ಎಕರೆ 20 ಗುಂಟೆ, ಕೆಂಜಿಗದಹಳ್ಳಿಯ ಸರ್ವೆ ನಂಬರ್ 69/1ರ 1 ಎಕರೆ 30 ಗುಂಟೆ ಮತ್ತು 69/2ರ 3 ಎಕರೆಯ ಒಟ್ಟು 17 ಎಕರೆ 11 ಗುಂಟೆಯಲ್ಲಿ ನಿರ್ಮಾಣವಾಗಿದ್ಧ ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಲಾಗಿದೆ.