ನೆಲಮಂಗಲ: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಹೇಮಾವತಿ ಹಾಗೂ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿದ್ದು, 13 ಕ್ಲಿನಿಕ್ಗಳಿಗೆ ಬೀಗ ಜಡಿದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಟಿಹೆಚ್‌ಒ ಡಾ.ಹೇಮಾವತಿ, "ಸೋಂಪುರ ಹೋಬಳಿಯಲ್ಲಿ 5 ಸೇರಿದಂತೆ ತಾಲೂಕಿನಾದ್ಯಂತ 13 ಅನಧಿಕೃತ ಕ್ಲಿನಿಕ್ಗಳ ಮೇಲೆ ದಾಳಿ ಮಾಡಿದ್ದು, ಎಲ್ಲಾ ಕ್ಲಿನಿಕ್‌ಗಳಿಗೂ ಬೀಗ ಜಡಿಯಲಾಗಿದೆ. ಬಾಗಿಲಿನ ಮೇಲೆ ನೋಟಿಸ್ ಹಚ್ಚಲಾಗಿದೆ. ಪರವಾನಗಿ ಇಲ್ಲದೆ ಅನಧಿಕೃತವಾಗಿ 'ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್ ಆ್ಯಕ್ಟ್ 2009' ಪ್ರಕಾರ ನಮೂದಿಸದೇ ಇದ್ದ ಕ್ಲಿನಿಕ್ಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ ಕೆಲವು ಕ್ಲಿನಿಕ್‌ಗಳು ನೋಟಿಸ್ ನೀಡಿದರೂ ಸ್ಪಂದಿಸಿರಲಿಲ್ಲ. ಅಂತಹ ಕ್ಲಿನಿಕ್ಗಳಾದ, ಸೋಂಪುರದ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ಶ್ರೀ ತಿರುಮಲ ಕ್ಲಿನಿಕ್, ನಿಡವಂದದ ಸಿದ್ಧಗಂಗಾ, ಶ್ರೀ ಮಾರುತಿ, ಶ್ರೀ ನಂದಿ ಹಾಗೂ ನರಸೀಪುರದ ಮಾರುತಿ ಕ್ಲಿನಿಕ್ಗಳನ್ನು ಸೀಜ್ ಮಾಡಲಾಗಿದೆ" ಎಂದು ತಿಳಿಸಿದರು.
"ಕೆಪಿಎಂಇ ಆ್ಯಕ್ಟ್ 2009ರ ಪ್ರಕಾರ ಯಾವುದೇ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆ, ಲ್ಯಾಬ್ಗಳು ಪ್ರಾರಂಭ ಆಗುವುದಕ್ಕೂ ಮೊದಲೇ ಪರವಾನಗಿ ಪಡೆದುಕೊಳ್ಳಬೇಕು. ಇದರಡಿಯಲ್ಲಿ ಅವರು ಕೆಲವು ನಿಯಮ ಹಾಗೂ ನಿಬಂಧನೆಗಳನ್ನು ಯಾವ ರೀತಿ ಪಾಲಿಸುತ್ತಾರೆ, ವಿದ್ಯಾರ್ಹತೆ ಏನು, ಬಯೋಮೆಡಿಕಲ್ ವೇಸ್ಟ್ ಏನು, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಅವರಿಗೆ ರಿಜಿಸ್ಟ್ರೇಷನ್ಗೆ ಅವಕಾಶ ಕೊಡುತ್ತೇವೆ. ಇದರಿಂದ ಸಾರ್ವಜನಿಕರಿಗೆ ಸುಧಾರಿತ ಆರೋಗ್ಯ ಸೇವೆ ದೊರಕಲು ಸಾಧ್ಯವಾಗುತ್ತದೆ."
"ಆದರೆ ಕೆಲವೊಂದು ಸಂಸ್ಥೆಗಳು ಈ ಪರವಾನಗಿ ಪಡೆಯದೇ ಕೆಲಸ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಸಂಸ್ಥೆಗಳಿಗೆ, ರಿಜಿಸ್ಟ್ರೇಸನ್ ಮಾಡಿಸಿಕೊಳ್ಳುವಂತೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನಾವು ನೋಟಿಸ್ ಕೊಟ್ಟಿದ್ದೆವು. ಆದರೆ ಕೆಲವು ಕ್ಲಿನಿಕ್‌ಗಳು ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಹಾಗೇ ಕಾರ್ಯ ನಿರ್ವಹಿಸುತ್ತಿದ್ದವು. ಜಿಲ್ಲಾಧಿಕಾರಿ ಹಾಗೂ ಡಿಹೆಚ್ಒ ಆದೇಶದ ಮೇಲೆ ಅಂತಹ ಕ್ಲಿನಿಕ್ಗಳ ಮೇಲೆ ತಂಡದ ಜೊತೆ ದಾಳಿ ನಡೆಸಿ, ಸೀಜ್ ಮಾಡಿದ್ದೇವೆ."