ಕರ್ನಾಟಕ

karnataka

ETV Bharat / state

ಆರು ತಿಂಗಳಲ್ಲಿ ಎರಡು ಬಾರಿ ಕುಸಿದ ಮೇಲ್ಸೇತುವೆ: ಸಾರ್ವಜನಿಕರಲ್ಲಿ ಆತಂಕ - undefined

ಉದ್ಘಾಟನೆಯಾದ ಆರೇ ತಿಂಗಳಲ್ಲಿ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ರೈಲ್ವೆ ಮೇಲ್ಸೇತುವೆ ಎರಡನೇ ಬಾರಿ ಕುಸಿದಿದ್ದು, ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ

By

Published : Jul 12, 2019, 11:34 PM IST

ದೊಡ್ಡಬಳ್ಳಾಪುರ:ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರೇ ತಿಂಗಳ ಹಿಂದೆಯಷ್ಟೆ ಪೂರ್ಣಗೊಂಡಿದೆ. ಆದರೆ, ಆರು ತಿಂಗಳ ಅವಧಿಯಲ್ಲೆ ತಡೆಗೊಡೆಗಳು ಕಳಚಿ ಬಿದ್ದಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿ ಬರುತ್ತಿದೆ.

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ

ಈ ಹಿಂದೆ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆದಿತ್ತು. ಹೆದ್ದಾರಿ ಅಭಿವೃದ್ಧಿಗೆ ಅಡ್ಡವಾಗಿ ಎರಡು ರೈಲ್ವೆ ಗೇಟ್​ಗಳಿದ್ದ ಕಾರಣ ಸುಮಾರು ₹40 ಕೋಟಿ ವೆಚ್ಚದಲ್ಲಿ ಎರಡು ಮೇಲ್ಸೇತುವೆ ನಿರ್ಮಾಣ ಸಹ ಮಾಡಲಾಗಿತ್ತು. ಕಳೆದ ವರ್ಷ 2018 ರ ಜನವರಿ 1 ರಂದು ಇದನ್ನು ಉದ್ಘಾಟಿಸಲಾಗಿತ್ತು. ಆದರೆ ಇದೇ ಸೇತುವೆ ಉದ್ಘಾಟನೆಗೆ ಮುನ್ನವೇ ತಡೆಗೋಡೆ ಕಳಚಿ ಬಿದ್ದಿತ್ತು. ನಂತರ ಕುಸಿದ ತಡೆಗೋಡೆಗಳಿಗೆ ತೇಪೆ ಹಚ್ಚುವ ಮೂಲಕ ಮೇಲ್ಸೇತುವೆ ಉದ್ಘಾಟನೆ ಮಾಡಿದರು.

ಆರೇ ತಿಂಗಳಲ್ಲಿ 2ನೇ ಬಾರಿಗೆ ಕುಸಿದ ಸೇತುವೆ:

ಉದ್ಘಾಟನೆಯಾದ ಆರೇ ತಿಂಗಳಲ್ಲಿ ಮತ್ತೆ ತಡೆಗೋಡೆ ಕಳಚಿ ಬಿದ್ದಿವೆ. ಕಳಪೆ ಕಾಮಗಾರಿಯಿಂದ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಇದೇ ಸೇತುವೆ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಾಗು ಸೇತುವೆ ಕೆಳಗಡೆ ರೈಲುಗಳು ಸಹ ಸಂಚರಿಸುತ್ತವೆ. ಒಂದು ವೇಳೆ ಸೇತುವೆ ಕುಸಿದು ಬಿದ್ದರೆ ಭಾರೀ ಪ್ರಮಾಣದ ಅನಾಹುತವೇ ಸಂಭವಿಸುತ್ತದೆ. ಗುತ್ತಿಗೆದಾರನ ಧನದಾಹಕ್ಕೆ ಅಮಾಯಕ ಜನ ಪ್ರಾಣ ಕಳೆದುಕೊಳ್ಳ ಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆದ್ದಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್​ಗಳಿಂದ ಸುಂಕ ವಸೂಲಿ:

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಎರಡು ಕಡೇ ಟೋಲ್ ಕೇಂದ್ರಗಳು ತಲೆ ಎತ್ತಿವೆ. ವಾಹನಗಳಿಂದ ಸುಂಕ ವಸೂಲಿ ಮಾಡುತ್ತಿವೆ. ಒಂದು ಕಡೆ ಕಳಪೆ ಕಾಮಗಾರಿಯ ಮೇಲ್ಸೇತುವೆಗಳು ಮತ್ತೊಂದು ಕಡೆ ಪೂರ್ಣಗೊಳ್ಳದ ಹೆದ್ದಾರಿ ಕಾಮಗಾರಿ. ಇದು ಹಲವು ಅಪಘಾತಗಳಿಗೂ ಕಾರಣವಾಗಿದ್ದು ಅಮಾಯಕ ಜನರ ಪ್ರಾಣವನ್ನು ಬಲಿತೆಗೆದುಕೊಂಡಿವೆ ಅನ್ನೋದು ಸ್ಥಳೀಯರ ಆರೋಪ.

ಚುನಾವಣೆ ಸಂಧರ್ಭದಲ್ಲಿ ತರಾತುರಿಯಲ್ಲಿ ಉದ್ಘಾಟಿಸಿದ ಪರಿಣಾಮವೇ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಅಷ್ಟೇ ಅಲ್ಲದೇ ಈ ರೈಲ್ವೇ ಸೇತುವೆ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿರುವ ಸಂಶಯವಾಗುತ್ತಿದೆ. ಸೇತುವೆ ನಿರ್ಮಾಣ ಸಂಧರ್ಭದಲ್ಲಿ ಕಳಪೆ‌ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿರುವ ಸಾಧ್ಯತೆ ಇದೆ‌. ಹಾಗಾಗಿ‌ ಈ ಸೇತುವೆಯನ್ನು ನಿರ್ಮಿಸಿದ್ದ ಗುತ್ತಿಗೆದಾರನ ವಿರುದ್ಧ ಕಾನೂನಿನ ‌ರೀತಿಯಲ್ಲಿ ಕೈಗೊಳ್ಳಬೇಕು ಮತ್ತು ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details