ನೆಲಮಂಗಲ (ಬೆಂಗಳೂರು ಗ್ರಾಮಾಂತರ):ಸಹೋದರಿಯ ಮದುವೆ ಮಾಡಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ದಾಬಸ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಂಎಸ್ ಪಾಳ್ಯದ ಶೇಖ್ ಸಲ್ಮಾನ್ ಮತ್ತು ತಬರೇಜ್ ಬಂಧಿತ ಆರೋಪಿಗಳು. ದಾಬಸ್ ಪೇಟೆ ಹಳೆ ಸಂತೆಬೀದಿಯ ಛಾಯಶಂಕರ್ ಎಂಬುವರು ಡಿಸೆಂಬರ್ 10ರಂದು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳು ಅವರ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಛಾಯಶಂಕರ್, ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ವಿದ್ಯಾರಣ್ಯಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.