ಕರ್ನಾಟಕ

karnataka

ETV Bharat / state

ಟ್ರಾನ್ಸ್​ಫಾರ್ಮರ್ ಬಳಿ ಮೇಯುತ್ತಿದ್ದಾಗ ವಿದ್ಯುತ್ ಸ್ಪರ್ಶ: ಸೀಮೆ ಹಸುಗಳು ಸಾವು - ವಿದ್ಯುತ್ ಸ್ಪರ್ಶದಿಂದ ಹಸು ಸಾವು

ವಿದ್ಯುತ್ ಸ್ಪರ್ಶದಿಂದ ಎರಡು ಸೀಮೆ ಹಸುಗಳು ಸಾವನ್ನಪ್ಪಿವೆ. ಇವು ನಿತ್ಯ 50 ಲೀಟರ್ ಹಾಲು ನೀಡುತ್ತಿದ್ದವು. ಹಾಲನ್ನು ಹನುಮಂತರಾಯಪ್ಪ ಡೇರಿಗೆ ಹಾಕುತ್ತಿದ್ದು, ಕುಟುಂಬ ನಿರ್ವಹಣೆಗೆ ಪ್ರಮುಖ ಆಧಾರವಾಗಿದ್ದವು.

two-cow-died-by-power-shock
ಸೀಮೆ ಹಸುಗಳು ಸಾವು

By

Published : Jun 8, 2021, 4:01 AM IST

ದೊಡ್ಡಬಳ್ಳಾಪುರ:ಟ್ರಾನ್ಸ್​ಫಾರ್ಮರ್ ಬಳಿ ಮೇಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಎರಡು ಸೀಮೆ ಹಸುಗಳು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಗ್ರಾಮದಲ್ಲಿ ಘಟನೆ ನಡೆದಿದೆ. 2 ಲಕ್ಷ ಮೌಲ್ಯದ ಹಸುಗಳನ್ನ ಕಳೆದುಕೊಂಡ ರೈತ ಕಂಗಲಾಗಿದ್ದಾನೆ.

ಸಾಸಲು ಗ್ರಾಮದ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಎರಡು ಹಸುಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ಎರಡು ಹಸುಗಳು ನಿತ್ಯ 50 ಲೀಟರ್ ಹಾಲು ನೀಡುತ್ತಿದ್ದವು. ಹಾಲನ್ನು ಹನುಮಂತರಾಯಪ್ಪ ಡೇರಿಗೆ ಹಾಕುತ್ತಿದ್ದು, ಕುಟುಂಬ ನಿರ್ವಹಣೆಗೆ ಪ್ರಮುಖ ಆಧಾರವಾಗಿದ್ದವು. ಆದರೀಗ ಹಸುಗಳ ಸಾವಿನಿಂದ ರೈತ ಕಂಗಾಲಾಗುವಂತಾಗಿದೆ.

ಸೀಮೆ ಹಸುಗಳು ಸಾವು

ಟ್ರಾನ್ಸ್​ಫಾರ್ಮರ್​ಗೆ ಬೇಕಾಬಿಟ್ಟಿ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇದರಿಂದ ವಿದ್ಯುತ್ ಸೋರಿಕೆಯಾಗಿ ಮೇಯಲು ಹೋದ ಹಸುಗಳಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿವೆ. ನಮ್ಮ ಆದಾಯದ ಮೂಲವೇ ಕೈತಪ್ಪಿದೆ ಎಂದು ಹನುಮಂತರಾಯಪ್ಪ ತಮ್ಮ ನೋವು ತೋಡಿಕೊಂಡರು.

ABOUT THE AUTHOR

...view details