ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ - ಮಾದನಾಯಕನಹಳ್ಳಿ ಪೊಲೀಸರು

ಬೆಂಗಳೂರು ಹೊರವಲಯದ ಎಂ.ಎನ್.ಟಿ ಲೇಔಟ್ ಬಳಿಯ ಹನುಮಂತೇಗೌಡನ ಪಾಳ್ಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Arrest
Arrest

By

Published : Oct 5, 2020, 5:12 PM IST

ನೆಲಮಂಗಲ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಜುನಾಥ್ ಅಲಿಯಾಸ್ ಕೋಳಿ (24), ಸಿದ್ಧಿಕ್ ಪಾಷ (20) ಬಂಧಿತರು. ಇವರಿಂದ 10 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಹೊರವಲಯದ ಎಂ.ಎನ್.ಟಿ ಲೇಔಟ್ ಬಳಿಯ ಹನುಮಂತೇಗೌಡನಪಾಳ್ಯ ರಸ್ತೆಯಲ್ಲಿ ಈ ಇಬ್ಬರು ಯುವಕರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details