ದೇವನಹಳ್ಳಿ:ಚಿನ್ನದ ಬಿಸ್ಕತ್ ತುಂಬಿದ್ದ ರಬ್ಬರ್ ಚೀಲವನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 69.74 ಲಕ್ಷ ಮೌಲ್ಯದ 1 ಕೆ.ಜಿ 334 ಗ್ರಾಂ ತೂಕದ ಬಂಗಾರ ವಶಕ್ಕೆ ಪಡೆಯಲಾಗಿದೆ.
ಶ್ರೀಲಂಕಾ ಏರ್ಲೈನ್ಸ್ ಮೂಲಕ ಮುಂಬೈನಿಂದ ಬೆಂಗಳೂರಿಗೆ ಬಂದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮ ಸಾಗಣೆ ಬೆಳಕಿಗೆ ಬಂದಿದೆ. ಆರಂಭಿಕ ತಪಾಸಣೆ ವೇಳೆ ಚಿನ್ನ ಪತ್ತೆಯಾಗಿಲ್ಲ. ಬಳಿಕ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ತಪಾಸಣೆ ಮಾಡಿದಾಗ ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟಿರುವುದು ಗೊತ್ತಾಗಿದೆ.