ದೊಡ್ಡಬಳ್ಳಾಪುರ : ತಾಲೂಕಿನ ಸೂಲುಕುಂಟೆ ಗ್ರಾಮದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದ್(23) ಎಂಬಾತ ಮೃತ ದುರ್ದೈವಿ.
ತ್ರಿಕೋನ ಪ್ರೇಮ ಕಥೆ.. ಆತ್ಮಹತ್ಯೆಗೆ ಶರಣಾದ ಭಗ್ನಪ್ರೇಮಿ.. - ದೊಡ್ಡಬಳ್ಳಾಪುರ ಲೇಟೆಸ್ಟ್ ನ್ಯೂಸ್
ಪ್ರೀತಿಸುತ್ತಿದ್ದ ಯುವತಿಯನ್ನು ಮತ್ತೊಬ್ಬ ಪ್ರೀತಿಸುತ್ತಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬೆಳವಂಗಲ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ..
ಆನಂದ್
ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆನಂದ್ ಮೃತದೇಹ ಇಂದು ಕಟ್ಟೆಯಲ್ಲಿ ಪತ್ತೆಯಾಗಿದೆ. ಆನಂದ್ ಹಾಗೂ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ವೇಳೆ ಯುವತಿ ಸಮುದಾಯಕ್ಕೆ ಸೇರಿದ್ದ ಮತ್ತೊಬ್ಬ ಯುವಕ ಆಕೆಯನ್ನು ಪ್ರೀತಿಸುತ್ತಿದ್ದನಂತೆ.
ಯುವತಿ ಪೋಷಕರೂ ಅವನೊಂದಿಗೆ ಮದುವೆಗೆ ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಯುವಕ ಕಟ್ಟೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.