ಕರ್ನಾಟಕ

karnataka

ETV Bharat / state

ಫಾಸ್ಟ್​ ಟ್ಯಾಗ್​ ಇಲ್ಲದವರಿಂದ ಹೆಚ್ಚಿನ ಹಣ ವಸೂಲಿ: ಟೋಲ್​ ಗೇಟ್​ ಸಿಬ್ಬಂದಿ ಜೊತೆ ವಾಹನ ಸವಾರರ ಗಲಾಟೆ - ಫಾಸ್ಟ್​ಟ್ಯಾಗ್ ಇಲ್ಲದ ವಾಹನಗಳಿಂದ ಹೆಚ್ಚಿನ ಹಣ ವಸೂಲಿ

ಸರ್ಕಾರದ ನಿಯಮದಂತೆ ಇಂದು ಎಲ್ಲಾ ವಾಹನಗಳು ಫಾಸ್ಟ್​ಟ್ಯಾಗ್​ ಹಾಕಿಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಫಾಸ್ಟ್​ಟ್ಯಾಗ್ ಇಲ್ಲದ ವಾಹನಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ಇಂದು ಹೊಸಕೋಟೆ ಟೋಲ್​ನಲ್ಲಿ ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆ. ಅದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Hoskote
ಹೊಸಕೋಟೆ

By

Published : Feb 16, 2021, 12:52 PM IST

ಹೊಸಕೋಟೆ(ಬೆಂ.ಗ್ರಾಮಾಂತರ): ಫಾಸ್ಟ್​ ಟ್ಯಾಗ್​ ಕಡ್ಡಾಯ ಹಿನ್ನೆಲೆ, ಹೊಸಕೋಟೆ ಟೋಲ್​ನಲ್ಲಿ ಸರ್ಕಾರದ ನಿಯಮದಂತೆ ಮಧ್ಯರಾತ್ರಿಯಿಂದ ಟ್ಯಾಗ್ ಹಾಕಿಕೊಳ್ಳದೆ ಇರುವ ವಾಹನಗಳಿಗೆ ನಿನ್ನೆ ಇದ್ದ ಶುಲ್ಕಗಿಂತ ಇಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೋಲ್ ಸಿಬ್ಬಂದಿ ಜೊತೆ ವಾಹನ ಸವಾರರ ಗಲಾಟೆ

ಈ ಸಂಬಂಧ ಖಾಸಗಿ ಬಸ್ ನಿರ್ವಾಹಕ ಮತ್ತು ಟೋಲ್ ಸಿಬ್ಬಂದಿ ನಡುವೆ ಗಲಾಟೆ ನಡೆಯಿತು. ಫಾಸ್ಟ್​ಟ್ಯಾಗ್ ಹಾಕಿಕೊಳ್ಳದೆ ಬಂದಿದ್ದು, ಹೆಚ್ಚು ಶುಲ್ಕವನ್ನು ಕೇಳಿದಾಗ ನಿರ್ವಾಹಕ ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಉಂಟಾಯಿತು. ಇದರಿಂದ ಬಸ್ ಹಿಂದೆ ಇದ್ದ ಹತ್ತಾರು ವಾಹನಗಳಿಗೆ ಸಾಲಿನಲ್ಲಿ ಕಾಯುವಂತೆ ಆಯ್ತು.

ಜೀಪ್ ಮತ್ತು ಗಾಡಿಗಳಿಗೆ 40 ರೂ. ಮಿನಿ ಬಸ್ ಮತ್ತು ದೊಡ್ಡ ವಾಹನಗಳಿಗೆ 60 ರೂ. ಮತ್ತು ಟ್ರಕ್ ಮತ್ತು ಬಸ್ಸುಗಳಿಗೆ 130 ರೂ. ಸ್ವೀಕರಿಸುತ್ತಿದ್ದು, ಇದಕ್ಕೆ ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹೊಸಕೋಟೆ ಟೋಲ್​ನಲ್ಲಿ ನೂರಾರು ವಾಹನಗಳಿಗೆ ಫಾಸ್ಟ್​ಟ್ಯಾಗ್ ಹಾಕಿಕೊಳ್ಳದೇ ಹಣ ಪಾವತಿ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಟೋಲ್​ನಲ್ಲಿ ನೋಟಿಸ್ ಹಾಕಿದರೂ ವಾಹನ ಮಾಲೀಕರು ಫಾಸ್ಟ್​ಸ್ಟಾಗ್ ಮಾಡಿಸಿಕೊಳ್ಳದೆ ಇಂದು ಟೋಲ್ ಸಿಬ್ಬಂದಿ ಜೊತೆ ಗಲಾಟೆ ಮಾಡುತ್ತಿದ್ದಾರೆ.

ABOUT THE AUTHOR

...view details