ದೊಡ್ಡಬಳ್ಳಾಪುರ:ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿ ಹಲ್ಲೆಗೊಳಗಾಗುತ್ತಿದ್ದ ಘಟನೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಬಳಿ ನಡೆದಿದೆ. ಈ ವೇಳೆ, ಸಮಯಕ್ಕೆ ಸರಿಯಾಗಿ ಬಂದ 112 ವಾಹನದ ಪೊಲೀಸ್ ಕಾನ್ಸ್ಟೇಬಲ್ಸ್ ವ್ಯಕ್ತಿಯ ಪ್ರಾಣ ಉಳಿಸಿ, ಗಲಭೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಲಭೆ ನಿಯಂತ್ರಿಸಿದ ಪೊಲೀಸರನ್ನ ಪ್ರಶಂಸಿಸಲಾಗಿದೆ.
ಸೆಪ್ಟೆಂಬರ್ 17ರ ರಾತ್ರಿ 11 ಗಂಟೆ ಸಮಯದಲ್ಲಿ ಬೆಂಗಳೂರಿನ ಹಿದಾಯತ್ ಉಲ್ಲಾ ಎಂಬ ವ್ಯಕ್ತಿ ಬೈಕ್ನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ. ಹಿಂದೂಪುರದಿಂದ ಬೆಂಗಳೂರಿಗೆ ಗೋಮಾಂಸ ಸಾಗಿಸುವ ವೇಳೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಬಳಿ ಬೈಕ್ ನಿಯಂತ್ರಣ ತಪ್ಪಿ ಬೈಕ್ನಿಂದ ಕೆಳಗೆ ಬಿದ್ದಿದ್ದಾನೆ. ಚೀಲದಲ್ಲಿದ್ದ ಗೋಮಾಂಸ ರಸ್ತೆಯಲ್ಲಿ ಬಿದ್ದಿದೆ. ಗೋಮಾಂಸ ಸಾಗಾಟದ ಸುದ್ದಿ ಮಿಂಚಿನಂತೆ ಹರಡಿ, ಸ್ಥಳದಲ್ಲಿ 200 ಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಗೋಮಾಂಸ ಸಾಗಿಸುತ್ತಿದ್ದ ಬೈಕ್ಗೆ ಬೆಂಕಿ ಇಟ್ಟು, ಸಾರ್ವಜನಿಕರು ಹಿದಾಯತ್ ಉಲ್ಲಾನ ಮೇಲೆ ಹಲ್ಲೆಗೂ ಮುಂದಾಗಿದ್ದರು.