ಹೊಸಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಯಿತು.
ಸಾರಿಗೆ ನೌಕರರ ಮುಷ್ಕರ: ಊರಿಗೆ ತೆರಳಲು ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ - Hoskote latest update news
ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಯುಗಾದಿ ಹಬ್ಬಕ್ಕೆ ಊರುಗಳಿಗೆ ಹೋಗಲು ಬಸ್‌ಗಳಿಲ್ಲದೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಯುಗಾದಿ ಹಬ್ಬಕ್ಕೆ ಊರುಗಳಿಗೆ ಹೋಗಲು ಬಸ್‌ಗಳಿಲ್ಲದೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆಯಿಂದ ಸುಮಾರು ಎರಡು ಮೂರು ಗಂಟೆಗಳಿಗೂ ಹೆಚ್ಚು ಸಮಯದಿಂದ ಕಾದರು ಯಾವುದೇ ಬಸ್ ಬಾರದೆ ಇರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಜನರು ಪ್ರಯಾಣ ಮಾಡುತ್ತಿದ್ದಾರೆ.
ಹೊಸಕೋಟೆಯಿಂದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೆ ಹೊರಡುವ ಪ್ರಯಾಣಿಕರು ಬಸ್‌ಗಳಿಲ್ಲದೆ ಪರ್ಯಾಯವಾಗಿ ಕ್ಯಾಬ್, ಟೆಂಪೋಗಳ ಮೂಲಕ ಕೋಲಾರ, ಮುಳಬಾಗಿಲು, ಚಿಂತಾಮಣಿ, ಮಾಲೂರು, ಕೆಜಿಎಫ್ ನಗರಗಳಿಗೆ ತೆರಳಿ ಅಲ್ಲಿಂದ ಯಾವುದಾದರೂ ಬಸ್ಗಳು ಬಂದರೆ ಹೋಗಬಹುದೆಂದು ತೆರಳುತ್ತಿದ್ದಾರೆ.