ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ನಡೆದಿದೆ.
ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು - undefined
ದೊಡ್ಡಬಳ್ಳಾಪುರ ನಗರ ಹೊರವಲಯದ ನಂದಿ ಮೋರಿಯ ರೈಲ್ವೆ ಹಳಿಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
![ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು](https://etvbharatimages.akamaized.net/etvbharat/images/768-512-2908530-thumbnail-3x2-bng.jpg)
ಅಪರಿಚಿತ ಮಹಿಳೆ ಸಾವು
ದೊಡ್ಡಬಳ್ಳಾಪುರ ನಗರ ಹೊರವಲಯದ ನಂದಿ ಮೋರಿಯ ರೈಲ್ವೆ ಹಳಿಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯ ತಲೆಯ ಭಾಗ ಗುರುತು ಸಿಗದ ರೀತಿಯಲ್ಲಿ ಜಜ್ಜಿ ಹೋಗಿದ್ದರಿಂದ ಗುರುತು ಪತ್ತೆಯಾಗಿಲ್ಲ.
ಮೃತ ಮಹಿಳೆ ಸುಮಾರು 50 ವರ್ಷದವಳಾಗಿದ್ದು, 5 ಆಡಿ ಎತ್ತರ, ಎಣ್ಣೆಗೆಂಪು ಬಣ್ಣ ಹೊಂದಿದ್ದು, ಕೆಂಪು ಬಣ್ಣದ ಸೀರೆ, ಮಾಸಲು ಪಿಂಕ್ ಬಣ್ಣದ ಕುಪ್ಪಸ ಧರಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆಯ ವಾರಸುದಾರರು ಇದ್ದಲ್ಲಿ ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.