ಕರ್ನಾಟಕ

karnataka

ETV Bharat / state

ಎಣ್ಣೆ ಗುಂಗಲ್ಲಿ ಸಮಾಧಿಗಳನ್ನು ನಾಶಗೊಳಿಸಿದ ಕಿಡಿಗೇಡಿಗಳು..! - ದುಷ್ಕರ್ಮಿ

ಕಳೆದ ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಸ್ಮಶಾನದಲ್ಲಿ ಮದ್ಯ ಸೇವಿಸಿ ಸ್ಮಶಾನದಲ್ಲಿನ ಘೋರಿಗಳನ್ನು ನಾಶ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಮಾಧಿ

By

Published : Apr 24, 2019, 5:01 AM IST

Updated : Apr 24, 2019, 1:11 PM IST

ಬೆಂಗಳೂರು: ಒಬ್ಬ ವ್ಯಕ್ತಿ ಸತ್ತ ಮೇಲೆ ಆತನ ನೆನಪಿಗಾಗಿ ಸ್ಮಶಾನದಲ್ಲಿ ಗೋರಿಗಳನ್ನು ಕಟ್ಟಿ ಅದರ ಮೇಲೆ ಅವರ ಭಾವಚಿತ್ರ, ಅಥವಾ ಅವರ ಹೆಸರು ಕೆತ್ತನೆ ಮಾಡವುದು ಸಾಮಾನ್ಯ.

ಈಗಿನ ಕಾಲದಲ್ಲಿ ಮನುಷ್ಯ ಮನುಷ್ಯನ ನಡುವೆ ದ್ವೇಷದಿಂದ ಕೆಲ ಕಿಡಿಗೇಡಿಗಳು ಮದ್ಯಪಾನ ಮಾಡಿ ಸ್ಮಶಾನದಲ್ಲಿ ಇರುವ ಗೋರಿಗಳನ್ನು ಕಲ್ಲಿನಿಂದ ಹೊಡೆದು ನಾಶ ಮಾಡಿರುವ ಘಟನೆ ನಡೆದಿದ್ದು ಮನುಷ್ಯನ ವಿಕೃತಿಗೆ ಮತ್ತೊಂದು ಸಾಕ್ಷಿಯಂತಿದೆ.

ಕಳೆದ ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಸ್ಮಶಾನದಲ್ಲಿ ಮದ್ಯ ಸೇವಿಸಿ ಸ್ಮಶಾನದಲ್ಲಿನ ಗೋರಿಗಳನ್ನು ನಾಶ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಮಾಧಿ ನಾಶ

7 ಎಕರೆ 31 ಗುಂಟೆ ಜಮೀನನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ. ಊರಿನ ಹಿರಿಯರ ಸಮಾಧಿಗಳಿಗೆ ಅವರ ನೆನಪಿಗಾಗಿ ಗೋರಿಗಳನ್ನು ಕಟ್ಟಿ ಭಾವಚಿತ್ರ ಮತ್ತು ಅವರ ಹೆಸರುಗಳನ್ನು ಕೆತ್ತಲಾಗಿದೆ. ಬೇರೆ ಊರಿನವರು ಬಂದು ಗೋರಿಗಳನ್ನು ಒಡೆಯಲು ಸಾಧ್ಯವಿಲ್ಲ. ಇಲ್ಲಿರುವ ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಮಧ್ಯ ಸೇವಿಸಿ ಈ ಕೃತ್ಯವೆಸಗಿದ್ದಾರೆ. ಅಂತವರನ್ನು ಪತ್ತೆ ಹಚ್ಚಿ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಹಿಂದುಳಿದ ವರ್ಗದವರ ಸಮಾಧಿಗಳನ್ನು ಕಿಡಿಗೇಡಿಗಳು ದ್ವಂಸಗೊಳಿಸಿದ್ದಾರೆ.15 ವರ್ಷಗಳಿಂದ ತಹಶೀಲ್ದಾರವರಿಗೆ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಿಸಲು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ಎನ್ನುವುದೇ ತಿಳಿಯುತ್ತಿಲ್ಲ, ಒಂದೆಡೆ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಭಾವನಾತ್ಮಕತೆಗೆ ಇಲ್ಲಿ ಯಾವುದೇ ಬೆಲೆ ನೀಡದೇ ದುಷ್ಕರ್ಮಿಗಳು ಇಂತಹ ಕೃತ್ಯವನ್ನು ಎಸಗಿದ್ದಾರೆ. ತಪ್ಪಿತಸ್ಥರನ್ನು ಹುಡುಕಿ ಅವರಿಗೆ ಕಾನೂನು ರೀತೀಯ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Last Updated : Apr 24, 2019, 1:11 PM IST

ABOUT THE AUTHOR

...view details